ಕಾಸರಗೋಡು: ಬೈಕ್- ಲಾರಿ ನಡುವೆ ಅಪಘಾತ: ಇಬ್ಬರು ಯುವಕರು ಮೃತ್ಯು

Prasthutha|

- Advertisement -

ಕಾಸರಗೋಡು: ಬೈಕ್ ಹಾಗೂ ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕಣ್ಣೂರು ಬಳಿ ನಡೆದಿದೆ.

ಮೊಗ್ರಾಲ್ ಪುತ್ತೂರು ಕಂಬಾರ್ ಬೆದ್ರಡ್ಕ ನಿವಾಸಿ ಮುನಾಫ್ (24) ಮತ್ತು ಸ್ನೇಹಿತ ಲತೀಫ್ (23) ಮೃತರು.

- Advertisement -

ಕಣ್ಣೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಬೈಕ್ ಗೆ ಕಣ್ಣೂರು ಎ.ಕೆ.ಜಿ. ಆಸ್ಪತ್ರೆ ಮುಂಭಾಗ ಮಂಗಳೂರಿನಿಂದ ಕಣ್ಣೂರು ಕಡೆಗೆ ತೆರಳುತ್ತಿದ್ದ ಮಿನಿ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.



Join Whatsapp