ಕಿಸಾನ್ ಏಕ್ತಾ ಮೋರ್ಚಾ ಸೇರಿ ಹಲವರ ಟ್ವಿಟರ್ ಖಾತೆ ಅಮಾನತು | ವ್ಯಾಪಕ ಖಂಡನೆ
Prasthutha|
ನವದೆಹಲಿ : ಮುಖ್ಯವಾಹಿನಿ ಮಾಧ್ಯಮಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಪ್ರಧಾನಿ ಮೋದಿ ಸರಕಾರದ ವಿರುದ್ಧ ರೈತ ಹೋರಾಟಗಾರರು ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡು ಬಿಜೆಪಿಯ ಎಲ್ಲಾ ರಣತಂತ್ರಗಳಿಗೆ ಸೆಡ್ಡುಹೊಡಿದ್ದರು. ಇದೀಗ ಈ ಸೋಶಿಯಲ್ ಮೀಡಿಯಾ ಖಾತೆಗಳನ್ನೂ ನಿಯಂತ್ರಿಸುವ ಕಾರ್ಯ ನಡೆದಿದೆ.
ಕಿಸಾನ್ ಏಕ್ತಾ ಮೋರ್ಚಾ, ಕಾರವಾನ್ ಇಂಡಿಯಾ ಸೇರಿದಂತೆ ಹಲವು ಪ್ರಮುಖ ಸಂಸ್ಥೆ, ಸಂಘಟನೆ, ಸಾರ್ವಜನಿಕ ವ್ಯಕ್ತಿಗಳ ಟ್ವಿಟರ್ ಖಾತೆಗಳನ್ನು ಯಾವುದೇ ಕಾರಣ ನೀಡದೆ ತಡೆ ಹಿಡಿಯಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ ರೈತ ಹೋರಾಟಕ್ಕೆ ಸಂಬಂಧಿಸಿದ ಅಧಿಕೃತ ಟ್ವಿಟರ್ ಹ್ಯಾಂಡಲ್ @KisanEktaMorcha ವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಜೊತೆಗೆ ಕಾರವಾನ್ ಪತ್ರಿಕೆಯ ಟ್ವಿಟರ್ ಖಾತೆಯನ್ನು ಅಮಾನತಿನಲ್ಲಿಡಲಾಗಿದೆ.
ಕಾನೂನಾತ್ಮಕ ಬೇಡಿಕೆಯ ಹಿನ್ನೆಲೆಯಲ್ಲಿ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಟ್ವಿಟರ್ ನ ಈ ಕ್ರಮವನ್ನು ವ್ಯಾಪವಾಗಿ ಖಂಡಿಸಲಾಗುತ್ತಿದೆ. ಕಿಸಾನ್ ಏಕ್ತಾ ಮೋರ್ಚಾ ಟ್ವಿಟರ್ ಖಾತೆ ಅಮಾನತು ಹಿಂಪಡೆಯಲು ಆಗ್ರಹಿಸಿ ಟ್ವೀಟ್ ಮಾಡಲಾಗುತ್ತಿದೆ.
@thecaravanindia, @HansrajMeena, @Sushant_says, @Kisanektamorcha, @tractor2twitter, @immak02, @epicrofldon, @aartic01, @sanjykta, @salimdotcomrade, @pycpim, @jatt_junction, @PreetiSMenon ಮುಂತಾದ ಟ್ವಿಟರ್ ಖಾತೆಗಳನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಆಕ್ರೋಶ ಪಡಿಸುತ್ತಿರುವ ಟ್ವಿಟರ್ ಬಳಕೆದಾರರು, ಟ್ವಿಟರ್ ಕೇಸರೀಕರಣಗೊಳ್ಳುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ನೀಲಿ ಬಣ್ಣದ ಟ್ವಿಟರ್ ಲೋಗೊವನ್ನು ಕೇಸರಿ ಬಣ್ಣದಲ್ಲಿ ಮಾಡಿ ವೈರಲ್ ಮಾಡಲಾಗಿದೆ.
#RestoreHansrajMeena #TwitterIndia ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿವೆ. ಅದರಲ್ಲೂ #RestoreHansrajMeena ಹ್ಯಾಶ್ ಟ್ಯಾಗ್ ಸೆಕೆಂಡ್ ಟಾಪ್ ಟ್ರೆಂಡಿಂಗ್ ಆಗಿದೆ.