ದುರುದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ: ಬ್ರಿಜ್ ಭೂಷಣ್

Prasthutha|

ಹೊಸದಿಲ್ಲಿ: ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ತಬ್ಬಿಕೊಳ್ಳುವುದು ಅಪರಾಧವಲ್ಲ ಎಂದು ಭಾರತ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್ ಸಿಂಗ್‌ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಬುಧವಾರ ದೆಹಲಿಯ ರೂಸ್​ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ಬ್ರಿಜ್​ ಭೂಷಣ್​ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ವಿರೋಧಿಸಿ ವಕೀಲರ ಮೂಲಕ ವಾದವನ್ನು ಮಂಡಿಸಿದ್ದಾರೆ. ಬ್ರಿಜ್​ ಭೂಷಣ್​ ಪರ ಹಿರಿಯ ವಕೀಲ್​ ರಾಜೀವ್​ ಮೋಹನ್ ವಕಾಲತ್ತು ವಹಿಸಿದ್ದಾರೆ. ನ್ಯಾಯಮೂರ್ತಿ ಹರ್ಜಿತ್​ಸಿಂಗ್​ ಜಸ್ಬಾಲ್​ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ.

ಕುಸ್ತಿ ಪಂದ್ಯಗಳು ಹೆಚ್ಚಾಗಿ ಪುರುಷ ತರಬೇತುದಾರರನ್ನೇ ಹೊಂದಿರುತ್ತವೆ ಎಂದು ಹೇಳಿದ ವಕೀಲರು “ಆತಂಕದಿಂದ ಅಥವಾ ಉತ್ತಮ ಸಾಧನೆಗಾಗಿ ಆಟಗಾರನನ್ನು ಹುರಿದುಂಬಿಸುವ ಸಲುವಾಗಿ ಪುರುಷ ಕೋಚ್ ತಬ್ಬಿಕೊಳ್ಳುವುದು ಸಹಜ” ಎಂದು ಹೇಳಿದರು.

- Advertisement -

ಈ ವೇಳೆ ವಾದ-ಪ್ರತಿವಾದವನ್ನೂ ಸುಧೀರ್ಘವಾಗಿ ಆಲಿಸಿದ ನ್ಯಾಯಾಲಯವೂ ವಿವಾರಣೆಯನ್ನೂ ಗುರುವಾರ(ಇಂದು) ನಡೆಸುವುದಾಗಿ ತಿಳಿಸಿದೆ.



Join Whatsapp