ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿದ್ದು, 9 ಮಂದಿ ಮೀನುಗಾರರ ರಕ್ಷಣೆ ಮಾಡಲಾಗಿದೆ.
ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಉಪ್ಪುಂದ ತಾರಾಪತಿಯಿಂದ ಬೆಳಗ್ಗೆ ದೋಣಿ ಮೀನುಗಾರಿಕೆಗೆ ತೆರಳಿತ್ತು. 5 ನಾಟಿಕಲ್ ಮೈಲುಗಳ ದೂರದಲ್ಲಿ ದೋಣಿ ಪಲ್ಟಿಯಾಗಿದ್ದು, ಸಮೀಪದ ದೋಣಿಗಳಿಗೆ ಮಾಹಿತಿ ರವಾನೆ ಹಿನ್ನೆಲೆಯಲ್ಲಿ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಅಪಘಾತಕ್ಕೀಡಾದ ದೋಣಿಯಲ್ಲಿದ್ದ ನೀರನ್ನು ಖಾಲಿ ಮಾಡಿ ಬಳಿಕ ದೋಣಿಯನ್ನು ಮರವಂತೆ ಬಂದರಿಗೆ ರವಾನೆ ಮಾಡಲಾಗಿದೆ.