ಮುಸ್ಲಿಂ ವ್ಯಕ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ: 15 ಗ್ರಾ.ಪಂ. ಸದಸ್ಯರು ರಾಜೀನಾಮೆ

Prasthutha|

ರಾಯಚೂರು: ಮುಸ್ಲಿಂ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ 15 ಜನ ಗ್ರಾ.ಪಂ. ಸದಸ್ಯರು ಏಕಕಾಲಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಬಿಜೆಪಿ ಹಾಗೂ ಜೆಡಿಎಸ್ನ 15 ಜನ ಗ್ರಾಮ ಪಂಚಾಯತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. RH 01 ಗ್ರಾಮ್ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಅಧ್ಯಕ್ಷಗಿರಿ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಸಾಮಾನ್ಯ ವರ್ಗದವರಿದ್ದರೂ, ಅನ್ಯಕೋಮಿನ ವ್ಯಕ್ತಿ ಕಾಂಗ್ರೆಸ್ ನ ರಹಮತ್ ಪಾಷಾಗೆ ಅಧ್ಯಕ್ಷಪಟ್ಟ ನೀಡಿದ್ದರು.
ರೆಹಮತ್ ಪಾಷಾಗೆ ಅಧ್ಯಕ್ಷಗಿರಿ ನೀಡಿದಕ್ಕೆ ಸದಸ್ಯರು ಕ್ಯಾತೆ ತೆಗೆದಿದ್ದು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಆರ್ ಎಚ್ ಕ್ಯಾಂಪ್ 01 ಒಟ್ಟು 38 ಸದಸ್ಯರನ್ನ ಹೊಂದಿದ್ದು ಅದರಲ್ಲಿ ಓರ್ವ ಮಾತ್ರ ಅಲ್ಪಸಂಖ್ಯಾತ ಸದಸ್ಯರಿದ್ದಾರೆ. ಹೀಗಾಗಿ 15 ವರ್ಷಗಳ ಬಳಿಕ ಸಾಮಾನ್ಯ ವರ್ಗಕ್ಕೆ ಸಿಕ್ಕ ಮೀಸಲಾತಿ ಕೈತಪ್ಪಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು

Join Whatsapp