ಬಿಜೆಪಿ ಉಪಾಧ್ಯಕ್ಷರಾಗಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ನೇಮಕ !

Prasthutha|

ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಬಿಜೆಪಿ ಶನಿವಾರ ತನ್ನ ಉಪಾಧ್ಯಕ್ಷರಲ್ಲಿ ಒಬ್ಬರನ್ನಾಗಿ ನೇಮಿಸಿದೆ.
ಉತ್ತರ ಪ್ರದೇಶ ವಿಧಾನ ಪರಿಷತ್ ನ ಬಿಜೆಪಿ ಸದಸ್ಯರಾಗಿರುವ ಮನ್ಸೂರ್ ಈ ವರ್ಷ ಉಪಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

- Advertisement -


2017ರ ಮೇ 17 ರಂದು ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರ ಅಧಿಕಾರ ಅವಧಿ ಮೇ 2022ಕ್ಕೆ ಕೊನೆಯಾಗಬೇಕಿತ್ತು. ಆದರೆ ಕೋವಿಡ್ ಇತ್ಯಾದಿ ಕಾರಣಗಳಿಂದಾಗಿ ಕೇಂದ್ರ ಸರ್ಕಾರ ಇವರ ಅಧಿಕಾರ ಅವಧಿಯನ್ನು 1 ವರ್ಷ ವಿಸ್ತರಿಸಿತ್ತು.


ಉತ್ತರ ಪ್ರದೇಶದ ಮತದಾರರ ಪೈಕಿ ಸರಿಸುಮಾರು 19% ರಷ್ಟು ಮುಸ್ಲಿಂ ಮತದಾರರಿದ್ದಾರೆ. ಕನಿಷ್ಠ 30 ಲೋಕಸಭಾ ಸ್ಥಾನಗಳಲ್ಲಿ ಗಣನೀಯ ಅಸ್ತಿತ್ವವನ್ನು ಹೊಂದಿರುವ ಮುಸ್ಲಿಮರು ಈ ಪೈಕಿ 15 ರಿಂದ 20 ಕ್ಷೇತ್ರಗಳಲ್ಲಿ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

- Advertisement -


ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖ್ಯಸ್ಥ ಜಮಾಲ್ ಸಿದ್ದಿಕಿ ಮಾತನಾಡಿ, ಮನ್ಸೂರ್ ಒಬ್ಬ ರಾಷ್ಟ್ರೀಯವಾದಿ ಮುಸ್ಲಿಂ, ಅವರು ಯಾವಾಗಲೂ “ದೇಶ ಮೊದಲು” ಎಂಬ ಆದರ್ಶವನ್ನು ಉತ್ತೇಜಿಸುತ್ತಾರೆ. “ಮುಸ್ಲಿಂ ಸಮುದಾಯದಲ್ಲಿನ ದೋಷ ರೇಖೆಗಳ ಬಗ್ಗೆ ಅವರ ತಿಳುವಳಿಕೆ ದೇಶ ಮತ್ತು ಅದರ ಇತಿಹಾಸದ ಬಗ್ಗೆ ಅವರ ಜ್ಞಾನದಷ್ಟೇ ಆಳವಾಗಿದೆ. ಅವರು ಎಎಂಯು ವಿದ್ಯಾರ್ಥಿಗಳನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಿದ್ದಾರೆ ಮತ್ತು ಅವರನ್ನು ದಾರಿತಪ್ಪಿಸದಂತೆ ತಡೆದಿದ್ದಾರೆ. ಅವರ ನೇಮಕವು ಪಕ್ಷವನ್ನು ಉತ್ತಮವಾಗಿ ವಿಸ್ತರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.



Join Whatsapp