ರಾಹುಲ್ ಮದುವೆ ಯಾವಾಗ: ಮಹಿಳೆ ಕೇಳಿದ ಪ್ರಶ್ನೆಗೆ ಸೋನಿಯಾ ಗಾಂಧಿ ಹೇಳಿದ್ದೇನು?

Prasthutha|

ನವದೆಹಲಿ: ರಾಹುಲ್ ಗಾಂಧಿ ಅವರು ಇತ್ತೀಚೆಗೆ ಮಹಿಳೆಯರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ತನ್ನ ಭರವಸೆಯನ್ನು ಈಡೇರಿಸಿದ ರಾಹುಲ್,ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು.

- Advertisement -


ಹೀಗೆ ಮನೆಗೆ ಬಂದ ರೈತ ಮಹಿಳೆಯರ ಪೈಕಿ ಓರ್ವ ಮಹಿಳೆ ರಾಹುಲ್ ಗಾಂಧಿ ಅವರ ಮದುವೆ ಯಾವಾಗ? ಮಾಡಲಿದ್ದೀರಿ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ ʻನೀವೆ ಹುಡುಗಿಯನ್ನ ಹುಡುಕಿ..ʼ ಎಂದು ಚಟಾಕಿ ಹಾರಿಸಿದ್ದಾರೆ. ರಾಹುಲ್ ಗಾಂಧಿ ಹಂಚಿಕೊಂಡಿರುವ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಔತಣ ಕೂಟದ ವೇಳೆ ಮಹಿಳೆಯರ ಜೊತೆಗೆ ಆಹಾರ, ಮಹಿಳಾ ಸಬಲೀಕರಣ ಮತ್ತು GST ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡ ಹಿನ್ನಲೆ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಆಹ್ವಾನಿಸಿದ್ದೇನೆ ಎಂದು ಹೇಳಿದರು.

Join Whatsapp