ಪಾಟ್ನಾ: ಬಿಹಾರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಿಡಿಲು ಬಡಿದು ಕನಿಷ್ಠ 23 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಭಾರೀ ಮಳೆ, ಗುಡುಗು, ಮಿಂಚು ಪ್ರವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿರುವುದು ಅತ್ಯಧಿಕವಾಗಿದೆ. ಇದಲ್ಲದೇ, ಜಹಾನಾಬಾದ್, ಬಕ್ಸಾರ್ ಮತ್ತು ಜಮುಯಿಯಲ್ಲಿ ತಲಾ ಮೂರು, ಗಯಾ, ಬಂಕಾ ಮತ್ತು ಭಾಗಲ್ಪುರದಲ್ಲಿ ತಲಾ ಎರಡು, ಔರಂಗಾಬಾದ್ ಮತ್ತು ಕತಿಹಾರ್ನಲ್ಲಿ ತಲಾ ಒಂದು ಸಾವು ಆಗಿದೆ.
ಘಟನೆಗೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಪ್ರತಿ ಮೃತರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.