ಮೋದಿ ದೊಡ್ಡ ಮನಸ್ಸು ಮಾಡಿದ್ರೆ ಜುಲೈ 1ಕ್ಕೆ ಅಕ್ಕಿ ಸಿಗುತ್ತೆ: ಪ್ರಿಯಾಂಕ್ ಖರ್ಗೆ

Prasthutha|

ಕಲಬುರಗಿ: ಮೋದಿ ದೊಡ್ಡ ಮನಸ್ಸು ಮಾಡಿದರೆ ಜುಲೈ 1ಕ್ಕೆ 10 ಕೆಜಿ ಅಕ್ಕಿ ಸಿಗುತ್ತೆ. ಆದರೆ ಇವರು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆ ಕೂಡ ಚಿಂತಿಸಿದ್ದೇವೆ ಎಂದು ಕಲಬುರಗಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

- Advertisement -


ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, 25 ಜನ ಬಿಜೆಪಿ ಸಂಸದರಿದ್ದು, ಯಾಕೆ ಬಾಯಿಗೆ ಹೊಲಿಗೆ ಹಾಕಿ ಕೂತಿದ್ದೀರಿ. ಪ್ರತಾಪ್ ಸಿಂಹ ಎಷ್ಟು ಸ್ಥಾನ ಮೈಸೂರಲ್ಲಿ ಗೆಲ್ಲಿಸಿದ್ದಾರೆ. ಬರೀ ನಮ್ಮ ಪಕ್ಷದ ಬಗ್ಗೆ ಮಾತಾಡೋದು ಬಿಟ್ಟು ಕನ್ನಡಿಗರ ಬಗ್ಗೆ ಮಾತನಾಡಲಿ. ಇರೋ ಸ್ಟಾಕ್ ಪ್ರಕಾರ ಜೋಳ ಮತ್ತು ರಾಗಿ ನೀಡಿದ್ರು ಕೇವಲ ಎರಡು ಕಿಲೋ ಮಾತ್ರ ಕೊಡಲು ಸಾಧ್ಯವಾಗುತ್ತೆ. ಜೋಳ ಮತ್ತು ರಾಗಿ ಕೊಡಲು ಕೂಡಾ ಸ್ಟಾಕ್ ಇಲ್ಲ. ಕೇಂದ್ರ ಸರ್ಕಾರದ ಪ್ರತ್ಯೇಕ ಹೊಲ ಗದ್ದೆಗಳಿವಿಯಾ? ರಾಜ್ಯ ಸರ್ಕಾರದಿಂದ ಖರೀದಿಸಿದ ಆಹಾರ ಧಾನ್ಯಗಳೇ ಕೇಂದ್ರದಲ್ಲಿರೋದು ಎಂದಿದ್ದಾರೆ.


ಮೋದಿ ಅವರು ದೊಡ್ಡ ಮನಸು ಮಾಡಿದ್ರೆ ಜುಲೈ 1ಕ್ಕೆ ಹತ್ತು ಕಿಲೋ ಅಕ್ಕಿ ಸಿಗುತ್ತೆ. ಕಾನೂನಾತ್ಮಕ ಹೋರಾಟ ಮಾಡೋ ಬಗ್ಗೆ ಕೂಡಾ ಚಿಂತನೆ ನಡೆಸಿದ್ದೇವೆ. ಅನ್ನಭಾಗ್ಯ ಅಕ್ಕಿ ಕಳ್ಳತನ ಮಾಡೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಕ್ರೋಶ ಹೊರ ಹಾಕಿದ್ದಾರೆ.



Join Whatsapp