ಬೆಂಗಳೂರು: ಖಾಸಗಿ ಬಸ್, ಆಟೋದಲ್ಲೂ ಉಚಿತ ಟಿಕೆಟ್ ನೀಡಿ ಎಂದು ಶಾಸಕ ಆರ್. ಅಶೋಕ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಇಂದು(ಸೋಮವಾರ) ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಖಾಸಗಿ ಬಸ್, ಆಟೋ, ಕ್ಯಾಬ್ ಗಳಿಗೆ ಭಯಂಕರ ನಷ್ಟವಾಗುತ್ತಿದೆ, ಅವುಗಳಲ್ಲೂ ಉಚಿತ ಪ್ರಯಾಣ ಅಂತ ಘೋಷಿಸಿದರೆ ಅವರು ಬದುಕಿಕೊಳ್ಳುತ್ತಾರೆ ಎಂದು ಹೇಳಿದರು.
ಉಚಿತ ಡ್ರಾಮ ಬಹಳ ದಿನ ನಡೆಯದು, ಲೋಕ ಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಏನೇನಾಗಲಿದೆಯೋ? ಹಾಗಾಗಿ, ಎಲ್ಲಿಯವರೆಗೆ ಫ್ರೀ ಸ್ಕೀಮ್ ಗಳು ಜಾರಿಯಲ್ಲಿರುತ್ತವೋ ಅಲ್ಲಿವರೆಗೆ ಜನ ಎಂಜಾಯ್ ಮಾಡಲಿ ಅಂತ ಅಶೋಕ ಕುಹುಕವಾಡಿದರು.