ಹಲ್ಲೆ ಪ್ರಕರಣವೊಂದರ ಆರೋಪಿಯ ಮನೆ ಕೆಡವಿ ಕ್ರೌರ್ಯ ಮೆರೆದ ಮಧ್ಯಪ್ರದೇಶ ಸರಕಾರ!

Prasthutha|

ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸರಕಾರ ಹಲ್ಲೆ ಪ್ರಕರಣವೊಂದರ ಆರೋಪಿಯ ಮನೆಯನ್ನು ಕೆಡವಿ ಕ್ರೌರ್ಯ ಮೆರೆದ ಘಟನೆ ವರದಿಯಾಗಿದೆ.

- Advertisement -

 ಭೋಪಾಲ್ ನಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆಗೆ ಬೆಲ್ಟ್ ಕಟ್ಟಿ, ಕಿರುಕುಳ ನೀಡಿ ಹಲ್ಲೆ ನಡೆಸಿದ್ದ ಆರೋಪದಲ್ಲಿ ಸಮೀರ್, ಫೈಜಾನ್ ಮತ್ತು ಸಾಜಿದ್ ಎಂಬ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಭೋಪಾಲ್ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಮೂವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. 

- Advertisement -

“ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ 1980 (National Security Act)ಅನ್ನು ಸಹ ಅನ್ವಯಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುವುದು. ನಾವು ಭೋಪಾಲ್‌ನಲ್ಲಿ ಇಂತಹ ಕ್ರಮವನ್ನು ಕೈಗೊಳ್ಳುತ್ತೇವೆ ಅದು ರಾಜ್ಯಾದ್ಯಂತ ಸಂದೇಶವನ್ನು ಕಳುಹಿಸುತ್ತದೆ” ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಎನ್‌ಐಗೆ ತಿಳಿಸಿದರು.

ಯುವಕನಿಗೆ ಕಿರುಕುಳ ನೀಡಿ ಥಳಿಸಿದ ಆರೋಪ ಹೊತ್ತಿರುವ ಸಮೀರ್ ಖಾನ್ ಎಂಬಾತನ ಮನೆಯನ್ನು ಪೊಲೀಸರ ಸಮ್ಮುಖದಲ್ಲಿ ಸ್ಥಳೀಯ ಆಡಳಿತ ಧ್ವಂಸಗೊಳಿಸಿದೆ.

Join Whatsapp