ನವದೆಹಲಿ: ಪ್ರಿಯಕರ ಫೈಝಾನ್ ಅನ್ಸಾರಿ ಜೊತೆ ಖ್ಯಾತ ನಟಿ ಗೆಹನಾ ವಸಿಷ್ಠ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಫೈಝಾನ್ ಅನ್ಸಾರಿ ಮತ್ತು ಗೆಹನಾ ವಸಿಷ್ಠ್ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದು ಅವರ ಸ್ವಂತ ನಿರ್ಧಾರ ಎಂದು ಹೇಳಲಾಗುತ್ತಿದೆ.
ಸೋಶಿಯಲ್ ಮೀಡಿಯಾ ಇನ್ ಫ್ಲೂಯನ್ಸರ್ ಆಗಿ ಫೈಝಾನ್ ಅನ್ಸಾರಿ ಗುರುತಿಸಿಕೊಂಡಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ.
ಗೆಹನಾ ವಸಿಷ್ಠ್ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಚತ್ತೀಸ್ ಗಡದವರು. ಮಾಡೆಲ್ ಆಗಿ ಜನಪ್ರಿಯತೆ ಪಡೆದ ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ