ಪ್ರಯಾಗ್ ರಾಜ್: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ಶವವನ್ನು ಮನೆಯ ಟ್ಯಾಂಕ್ ನಲ್ಲಿ ಬಚ್ಚಿಟ್ಟ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.
ಮೃತರನ್ನು 35 ವರ್ಷದ ಕೇಸರ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಅರವಿಂದ್ ಎಂದು ತಿಳಿದು ಬಂದಿದೆ.
ಮೇ 30 ರಂದು ಕೇಸರ್ ಕುಟುಂಬವು ಆಕೆ ಕಾಣೆಯಾಗಿದ್ದಾರೆ ಎಂದು ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತರ ಫೋನ್ ಕರೆ ವಿವರಗಳ ಆಧಾರದ ಮೇಲೆ ಅರವಿಂದ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬೆಳಕಿಗೆ ಬಂದಿದೆ.