ಆರ್ಥಿಕ ಮಹಾಪತನ | ಜಿಡಿಪಿ – ಶೇ. 23.9 | 40 ವರ್ಷದಲ್ಲೇ ಮಹಾ ಕುಸಿತ | 24 ವರ್ಷದಲ್ಲೇ ಅತಿ ಕನಿಷ್ಠ ದರ

Prasthutha|

ನವದೆಹಲಿ : ದೇಶದಲ್ಲಿ ಇದೇ ಮೊದಲ ಬಾರಿ ಐತಿಹಾಸಿಕ ಆರ್ಥಿಕ ಕುಸಿತ ಕಂಡಿದ್ದು, ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 23.9ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 3.1ರಷ್ಟು ಬೆಳವಣಿಗೆ ಕಂಡಿದ್ದ ಜಿಡಿಪಿ ದರ, ಈ ಬಾರಿ ದಾಖಲೆಯ ಕುಸಿತ ಕಂಡಿದೆ.

- Advertisement -

1996ರ ನಂತರ ಇದೇ ಮೊದಲ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ಕುಸಿತ ಕಂಡು ಬಂದಿದ್ದು, ಇದು 24 ವರ್ಷಗಳಲ್ಲೇ ಅತಿ ಕನಿಷ್ಠ ದರ ಎನ್ನಲಾಗಿದೆ. ಭಾರತೀಯ ಸಂಖ್ಯಾಶಾಸ್ತ್ರೀಯ ಕಚೇರಿ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳಿಂದ ಇದು ತಿಳಿದು ಬಂದಿದೆ.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಕಳೆದ ಮಾರ್ಚ್ ನಿಂದ ಸತತವಾಗಿ ಸುಧೀರ್ಘ ಅವಧಿಯ ವರೆಗೆ ವ್ಯಾಪಾರ, ಉದ್ಯೋಗ, ಉತ್ಪಾದನೆ ಸ್ಥಗಿತಗೊಂಡಿತ್ತು. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದರು.

- Advertisement -

ಕಳೆದ 40 ವರ್ಷದಲ್ಲೇ ಮಹಾ ಕುಸಿತ ಇದಾಗಿದ್ದು, ಈ ಆರ್ಥಿಕ ವರ್ಷದ ಮೊದಲ ತ್ರೈ ಮಾಸಿಕ ಅವಧಿಯಲ್ಲಿ ಭಾರತದಲ್ಲಿ ಹಿಂದೆಂದೂ ಕಾಣದ ನಿರುದ್ಯೋಗ ಸಮಸ್ಯೆ ತಲೆದೋರಿತ್ತು, ಕೊರೋನ ಸಂಕಷ್ಟ ಸಮಯವನ್ನು ನಿರ್ವಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿರುವುದೂ ದೇಶದ ಆರ್ಥಿಕ ಕುಸಿತಕ್ಕೆ ಪ್ರಮುಖ ಕಾರಣ ಎಂಬ ಆಪಾದನೆಯೂ ಇದೆ.

ಫೋಟೊ ಕೃಪೆ: ಬ್ಯುಸಿನೆಸ್ ಟುಡೇ



Join Whatsapp