ಬೆಂಗಳೂರು ಗಲಭೆಗೆ ಗಾಂಜಾ ನಂಟು : ಕಮಿಷನರ್ ಕಮಲ್ ಪಂತ್

Prasthutha|

ಬೆಂಗಳೂರು ಗಲಭೆಗೆ ಗಾಂಜಾ ವ್ಯಸನಿಗಳ ನಡುವಿನ ಒಳಜಗಳವೇ ಕಾರಣ ಎಂದು ಸಿಎಂ ಇಬ್ರಾಹಿಮ್ ಹೇಳಿಕೆ ನೀಡಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಸಿಸಿಬಿ ಪೊಲೀಸರು 1 ಕೋಟಿ ರೂಪಾಯಿ ಮೌಲ್ಯದ ಗೋದಾವರಿ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇದಕ್ಕೂ ಆಗಸ್ಟ್ 11 ರ ರಾತ್ರಿ ನಡೆದ ಬೆಂಗಳೂರು ಗಲಭೆಗೂ ನಂಟಿದೆ ಎಂದು ಹೇಳಿದ್ದಾರೆ. ಈ ಮೂಲಕ ಬೆಂಗಳೂರು ಗಲಭೆ ಮಾಧ್ಯಮಗಳ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಮತ್ತೊಂದು ಮಹತ್ವದ ಮಜಲಿಗೆ ತಲುಪಿದೆ ಎನ್ನಲಾಗಿದೆ.

- Advertisement -

ಸಿಸಿಬಿ ಪೊಲಿಸರು ಬಹುದೊಡ್ಡ ಗೋದಾವರಿ ಗಾಂಜಾ ಜಾಲವೊಂದನ್ನು ಭೀದಿಸಿದ್ದು, ಕಮಲ್ ಪಂತ್ ಅವರ ಪ್ರಕಾರ ಬೆಂಗಳೂರು ಗಲಭೆಯಲ್ಲೂ ಇದೇ ಗೋದಾವರಿ ಗಾಂಜಾ ಬಳಕೆಯಾಗಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಕಮಲ್ ಪಂತ್ ಅವರು, ಆಂಧ್ರಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯಿಂದ ಗಾಂಜಾವನ್ನು ತಂದು ಅಂತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.  ಮೈಸೂರಿನ ಕೆ ಆರ್ ಪುರಂನ ಮೂವರನ್ನು ಇದಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದ್ದು, ಇವರು ಹಲವು ವರ್ಷಗಳಿಂದ ಗಾಂಜಾ ಮಾರಾಟ ಮಾಡುವುದು ಹಾಗೂ ಅದರ ಸರಬರಾಜಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದಿದ್ದಾರೆ.ಬಂಧಿತ ಆರೋಪಿಯನ್ನು ಸಮೀರ್ ಎಂದು ಗುರುತಿಸಲಾಗಿದ್ದು, ಚಾಲಕನಾಗಿದ್ದಾನೆ. ಈಸ್ಟ್ ಗೋದಾವರಿ ಜಿಲ್ಲೆಯಿಂದ  ಲಾರಿಯಲ್ಲಿ ಗಾಂಜಾ ಸಾಗಣೆ ಮಾಡುವ ಹೊಣೆ  ಆತನ ಮೇಲಿತ್ತು. ಸಹಚರರಾದ ಕೈಸರ್ ಪಾಷಾ ಹಾಗೂ ಇಸ್ಮಾಯಿಲ್ ಮೂಲಕ ಮಧ್ಯವರ್ತಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು ಎಂದು ಮಾಹಿತಿ ನೀಡಿದರು.

Join Whatsapp