ಗಾಂಧಿ ಹತ್ಯಾ ಆರೋಪಿ ಸಾವರ್ಕರ್ ಜನ್ಮದಿನದಂದು ಹೊಸ ಸಂಸತ್ತಿನ ಉದ್ಘಾಟನೆ ಮಾಡಲಿರುವ ಮೋದಿ: ವ್ಯಾಪಕ ಟೀಕೆ

Prasthutha|

ದೆಹಲಿ: ಗಾಂಧಿ ಹತ್ಯೆ ಆರೋಪಿ ಸಾವರ್ಕರ್ ಅವರ ಜನ್ಮದಿನದಂದು ಹೊಸದಾಗಿ ನಿರ್ಮಾಣಗೊಂಡ ಸಂಸತ್ ಭವನದ ಉದ್ಘಾಟನೆಯನ್ನು ನಿಗದಿಪಡಿಸಿರುವ ಕೇಂದ್ರ ಸರಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

- Advertisement -

ಇದು ರಾಷ್ಟ್ರಪಿತನನ್ನು ಅವಮಾನಿಸಿದಂತೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಷ್ಟ್ರಪತಿಗಳೇ ಉದ್ಘಾಟನೆ ಮಾಡಬೇಕಾದ ಈ ಕಾರ್ಯಕ್ರಮವನ್ನು ಪ್ರಧಾನಿ ಏಕೆ ಉದ್ಘಾಟನೆ ಮಾಡುತ್ತಾರೆ? ಈ ನಿರ್ಧಾರ ರಾಜಕೀಯ ಪ್ರೇರಿತ ಎಂದು ವಿವಿಧ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಶೇಖರ್ ರೇ ಟ್ವೀಟ್ ಮಾಡಿ, 1949ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನವೆಂಬರ್ 26 ರಂದು ಅಥವಾ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ 75 ನೇ ವಾರ್ಷಿಕೋತ್ಸವದ ದಿನದಂದು ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸುವುದು ಸೂಕ್ತ ಸಮಯವಾಗಿದೆ. ಆದರೆ ಸಾವರ್ಕರ್ ಜನ್ಮದಿನವಾದ ಮೇ 28 ರಂದೇ ಏಕೆ ಉದ್ಘಾಟನೆ ಮಾಡುವುದೆಂದು ಪ್ರಶ್ನೆ ಮಾಡಿದ್ದಾರೆ.

- Advertisement -

“ಇದು ನಮ್ಮ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದಂತೆ. ಗಾಂಧಿ, ನೆಹರು, ಪಟೇಲ್, ಸುಭಾಷ್ ಚಂದ್ರ ಬೋಸ್ ಮೊದಲಾದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಡಾ| ಅಂಬೇಡ್ಕರ್ ಅವರನ್ನು ಖಂಡತುಂಡ ತಿರಸ್ಕಾರ ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿರುವ ನೂತನ ಸಂಸತ್ ಭವನವನ್ನು ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್ ಜನ್ಮದಿನವಾದ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.



Join Whatsapp