ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಬೆಂಬಲಿಗರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆ ಆರೋಪ

Prasthutha|

►’ಇನಾಯತ್ ಅಲಿ ಬೆಂಬಲಿಸಿದ್ದಕ್ಕೆ ನನ್ನ ವಿರುದ್ಧ ದ್ವೇಷ ಇಟ್ಟುಕೊಂಡಿದ್ದಾರೆ’ ಎಂದ ನಿಝಾಮ್

- Advertisement -


ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಶಾಸಕ ಮೊಯ್ದಿನ್ ಬಾವಾ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆ ನಡೆಸಿರುವ ಆರೋಪದಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.


ಮಂಗಳವಾರ ರಾತ್ರಿ ಮೊಯ್ದಿನ್ ಬಾವಾ ಅವರು ಕಾರಿನಲ್ಲಿ ಮತದಾರರಿಗೆ ಹಂಚಲು ಹಣ ತಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರನ್ನು ತಡೆದಾಗ, 10 ರಿಂದ 20 ಜನ ಬಾವಾ ಬೆಂಬಲಿಗರು ಕಾರಿನಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ನಿಝಾಮ್ ಗುರುಪುರ ಮತ್ತು ಹಶೀರ್ ಕೈಕಂಬ ಎಂಬವರಿಗೆ ಮೊಯ್ದಿನ್ ಬಾವಾ ಅವರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -


ಈ ಬಗ್ಗೆ ನಿಝಾಮ್ ಗುರುಪುರ ಮಾತನಾಡಿದ್ದು, ಈ ಹಿಂದೆ ನಾನು ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಕಾರು ಚಾಲಕನಾಗಿದ್ದು, ಇತ್ತೀಚೆಗಷ್ಟೇ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರಿಗೆ ಬೆಂಬಲ ಸೂಚಿಸಿದ್ದೆ. ಇನಾಯತ್ ಅಲಿ ಬೆಂಬಲಿಸಿದ್ದಕ್ಕೆ ನನ್ನ ವಿರುದ್ಧ ದ್ವೇಷ ಇಟ್ಟುಕೊಂಡಿದ್ದಾರೆ. ನಾನು ಮೊಯ್ದಿನ್ ಬಾವಾ ಮೇಲೆ ಹಲ್ಲೆ ಮಾಡಿದ್ದೇನೆ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಮೊಯ್ದಿನ್ ಬಾವಾ ಮೇಲೆ ನಾನು ಹಲ್ಲೆ ಮಾಡಿಲ್ಲ, ಪ್ರಮಾಣ ಮಾಡಲು ನಾನು ಸಿದ್ಧ ಎಂದು ಹೇಳಿದ್ದಾರೆ.


ಮೊಯ್ದಿನ್ ಬಾವಾ ಅವರ 10 ರಿಂದ 20 ಜನ ಬೆಂಬಲಿಗರು ಬಜ್ಪೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಮೊಯ್ದಿನ್ ಬಾವಾ ಕಣ್ಣೆದುರಲ್ಲೇ ಹಲ್ಲೆ ಮಾಡಿದ್ದಾರೆ. ನನ್ನ ಜೀವಕ್ಕೆ ಅಪಾಯವಾದರೆ ಮೊಯ್ದಿನ್ ಬಾವಾ ಬೆಂಬಲಿಗರೇ ಹೊಣೆ ಎಂದು ನಿಝಾಮ್ ಹೇಳಿದ್ದಾರೆ.


ಹಲ್ಲೆಗೊಳಗಾದ ನಿಝಾಮ್ ಹಾಗೂ ಹಶೀರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮೊಯ್ದಿನ್ ಬಾವಾ ಅವರು ನಿಝಾಮ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಮಾಡಿದ್ದು, ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ.

ಸದ್ಯ ಮೊಯ್ದಿನ್ ಬಾವಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂ‍ದು ಹೇಳಲಾಗಿದೆ.



Join Whatsapp