ನಿಮ್ಮ ಮತಗಟ್ಟೆಯ ವಿವರ ತಿಳಿಯಬೇಕೇ?ಚುನಾವಣಾ ಆಯೋಗದ ಈ ಆ್ಯಪ್​ ಡೌನ್‌ಲೋಡ್ ಮಾಡಿ!

Prasthutha|

- Advertisement -

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಇಂದು ಬೆಳಗ್ಗೆ 7ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿರಲಿದೆ.

ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಯಾವುದೇ ಅಹಿಯಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೂ ಸಹ ಅಲರ್ಟ್ ಆಗಿದೆ.

- Advertisement -

ಮತದಾನಕ್ಕೆ ಬರುವವರಿಗೆ ಸಮಸ್ಯೆಯಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ ವಿವರವನ್ನ ಚುನಾವಣಾ ಆಯೋಗದ ಆ್ಯಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ.

ಚುನಾವಣಾ ಆಯೋಗವು ‘ಚುನಾವಣಾ’ ಎಂಬ ಮೊಬೈಲ್ ಅಪ್ಲಿಕೇಷನ್ (ಮೊಬೈಲ್ ಆ್ಯಪ್) ಬಿಡುಗಡೆ ಮಾಡಿದೆ. ಈ ಆ್ಯಪ್ ನಲ್ಲಿ search by epic no ಅಥವಾ search by name ಆಯ್ಕೆ ಮಾಡಿ. ನಂತರ ಓಟರ್ ಐಡಿ ನಂಬರ್ ಹಾಕಿದರೆ ನೀವು ಯಾವ ಮತಗಟ್ಟೆಗೆ ಹೋಗಬೇಕು ಎನ್ನುವ ಸಂಪೂರ್ಣ ಮಾಹಿತಿ ನೀಡಲಿದೆ.
ಜಿಪಿಎಸ್ ಆನ್ ಲೈನ್ ಮ್ಯಾಪ್ ಆಧಾರಿಸಿ ಲೋಕೇಶನ್ ಮೂಲಕವೂ ಮತಗಟ್ಟೆಗೆ ಹೋಗಬಹುದಾಗಿದೆ.

ಕರ್ನಾಟಕ ಚುನಾವಣಾ ಮಾಹಿತಿ ಎಂಬ ವೆಬ್ ಸೈಟ್ ಕೂಡ ರೂಪಿಸಲಾಗಿದ್ದು, ಚುನಾವಣಾ ಆ್ಯಪ್ ಇದೇ ವೆಬ್ ಸೈಟ್ ಅಡಿಯಲ್ಲಿ ಕೆಲಸ ಮಾಡುತ್ತದೆ. ಈ ವೆಬ್ ಸೈಟ್ ಅಥವಾ ಆ್ಯಪ್ ಮೂಲಕ ಮತದಾರರು ತಮ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ಹಾಗೂ ಇತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ.



Join Whatsapp