ಇಂದು ಪ್ರಜಾಪ್ರಭುತ್ವದ ಹಬ್ಬ| ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ ಆರಂಭ

Prasthutha|

ಬೆಂಗಳೂರು: ಇಂದು ಪ್ರಜಾಪ್ರಭುತ್ವದ ಹಬ್ಬ! ರಾಜ್ಯದ ಗದ್ದುಗೆಯ ಭವಿಷ್ಯ ನಿರ್ಧಾರಕ್ಕೆ ಪ್ರಜಾ ದೊರೆಗಳು ಮುಂದಾಗಿದ್ದು, ಬೆಳಗ್ಗೆ 7 ಗಂಟೆಗೆ ರಾಜ್ಯಾದ್ಯಂತ ಮತದಾನ ಆರಂಭವಾಗಿದೆ.

- Advertisement -

ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಲು ಮತಗಟ್ಟೆಯ ಬಳಿ ಆಗಮಿಸುತ್ತಿದ್ದಾರೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಚುನಾವಣಾ ಆಯೋಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಎಲ್ಲರು ತಪ್ಪದೇ ಮತದಾನ ಮಾಡುವಂತೆ ಕರೆ ಕೊಟ್ಟಿದೆ. ಸುಭದ್ರ ಕರ್ನಾಟಕಕ್ಕಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯ ಕೂಡ ಆಗಿದೆ.

ಬುಧವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅರ್ಹ ಮತದಾರರೆಲ್ಲರೂ ತಮ್ಮ ಹಕ್ಕು ಚಲಾಯಿಸಬಹುದು.

- Advertisement -

ಈ ಬಾರಿ ಹೊಸದಾಗಿ 16,04,285 ಮತದಾರರು ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ 18ರಿಂದ 19 ವಯಸ್ಸಿನ 11,71,558 ಯುವ ಮತದಾರರಿದ್ದು, ಯುವಕರು 645140, ಯುವತಿಯರು 526237, ಇತರೆ 181 ಮತದಾರರಿದ್ದಾರೆ.

Join Whatsapp