ಮಂಗಳೂರು: ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ .ಸುಮತಿ ಎಸ್ ಹೆಗ್ಡೆ ಜಾತಿ ,ಮತ ಭೇದ ಮರೆತು ಸರ್ವಜನರ ಆಶಾಕಿರಣ ವಾಗಿದ್ದು , ಅವರಿಗೆ ಕ್ರೈಸ್ತ ಸಮುದಾಯ ಈ ಬಾರಿ ಮತ ನೀಡಲಿದೆ ಎಂದು ಮಂಗಳೂರು ನಗರ ದಕ್ಷಿಣ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ದಿನೇಶ್ ಮೈಕಲ್ ಪಾಯಿಸ್ ಹೇಳಿದ್ದಾರೆ.
ಈ ಕ್ಷೇತ್ರದ ಕ್ರೈಸ್ತ ಸಮುದಾಯದ ಸಂಘಟನೆಗಳೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸಮಸ್ಯೆಗಳು ಬಂದಾಗ ಜಾತಿ , ಧರ್ಮ ನೋಡದೇ ಅನೇಕ ಜನರಿಗೆ ನೆರವಾಗಿದ್ದಾರೆ. ಅಂದು ಕೊರೋನಾ ನಿಮಿತ್ತ ಲಾಕ್ ಡೌನ್ ಸಮಯ ಸಾಮಾನ್ಯ ಜನರು ಆಹಾರಕ್ಕೆ ಪರದಾಡಿದಾಗ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಆಹಾರದ ಕಿಟ್ ವಿತರಿಸುವಾಗ ಕ್ರೈಸ್ತ ಸಮುದಾಯದ ಮಧ್ಯಮವರ್ಗದವರನ್ನೂ ಗುರುತಿಸಿ ನೆರವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಜನರು ಕಾಂಗ್ರೆಸ್ ಹಾಗೂ ಬಿಜೆಪಿಯ ಬದಲು ಮಂಗಳೂರು ನಗರ ದಕ್ಷಿಣ ದಲ್ಲಿ ಜೆಡಿಎಸ್ ಪರ ಮತ ಚಲಾಯಿಸಲಿದ್ದಾರೆ. ಈ ಬಾರಿ ನಮ್ಮ ಪಕ್ದ ಸಂಘಟಿತವಾಗಿದ್ದು ಬೂತ್ ಮಟ್ಟದ ನಿರ್ವಹಣೆ ಅಚ್ಚುಕಟ್ಟಾಗಿದ್ದು, ಕ್ಷೇತ್ರದಲ್ಲಿ ಪಕ್ಷವು ಪ್ರಬಲ ವಾಗಿದ್ದು ಈ ಬಾರಿ ಅಚ್ಷರಿಯ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ.