ಮಂಗಳೂರು; ಈ ಬಾರಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಭೂತ ಪೂರ್ವ ಜಯಗಳಿಸಲಿದ್ದಾರೆಂದು ಯುವ ಜನತಾದಳ ನೇತಾರ ಶ್ರೀನಾಥ್ ರೈ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು, ಜೆಡಿಎಸ್ ಅಭ್ಯರ್ಥಿ ಮತಯಾಚನೆ ಸಂದರ್ಭ ಪ್ರಸ್ತುತ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಜನರು ರೋಸಿ ಹೋಗಿದ್ದು, ಈ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಟ್ಟು ಬದಲಾವಣೆಗಾಗಿ ಜೆಡಿಎಸ್ ಗೆ ಮತ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಅದಲ್ಲದೇ ಜೆಡಿಎಸ್ ಪಕ್ಷದ ಅಭ್ಯರ್ಥಿಯು ಅಧಿಕಾರ ಇಲ್ಲದೆಯೂ ಮಾಡಿದ ಸಾಧನೆ, ಕುಮಾರಸ್ವಾಮಿಯವರ ಜನಪರ ಪಂಚರತ್ನ ಯೋಜನೆಗಳು ಈ ಬಾರಿ ಮಂಗಳೂರಿನಲ್ಲಿಯೂ ಪಕ್ಷಕ್ಕೆ ಲಾಭ ತರುವುದೆಂಬ ವಿಶ್ವಾಸ ಇದೆ. ಈ ಮೂಲಕ ಈ ಕ್ಷೇತ್ರದಲ್ಲಿ ಅಚ್ಚರಿದಾಯಕ ಫಲಿತಾಂಶ ಬರಲಿದೆ ಎಂದರು.