ವ್ಯಕ್ತಿಗೆ ಡಿಕ್ಕಿ ಹೊಡೆದು 3 ಕಿ.ಮೀ ಎಳೆದೊಯ್ದ ಸಂಸದ ಕಾರು ಚಾಲಕ

Prasthutha|

ನವದೆಹಲಿ: ಕ್ಯಾಬ್  ಚಾಲಕನೊಬ್ಬ ವ್ಯಕ್ತಿಯೊಬ್ಬನನ್ನು ತನ್ನ ಕಾರಿನ ಬಾನೆಟ್‌’ಗೆ ನೇತುಹಾಕಿ ನಂತರ ಕಾರನ್ನು ಸುಮಾರು 3 ಕಿಲೋಮೀಟರ್ ಓಡಿಸಿದ ಅಮಾನವೀಯ ಘಟನೆ ಸನ್‌ ಲೈಟ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.

- Advertisement -

ಆರೋಪಿ ಬಿಹಾರದ ನವಾಡದ ಸಂಸದ ಚಂದನ್ ಸಿಂಗ್ ಅವರ ಚಾಲಕ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಘಟನೆಯ ಬಗ್ಗೆ ಮಾಹಿತಿ ಹೊರಬಿದ್ದ ತಕ್ಷಣ ದೆಹಲಿ ಪೊಲೀಸರು ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರು ರಾತ್ರಿ 11 ಗಂಟೆ ಸುಮಾರಿಗೆ ಆಶ್ರಮ ಚೌಕ್‌ನಿಂದ ನಿಜಾಮುದ್ದೀನ್ ದರ್ಗಾ ಕಡೆಗೆ ಬರುತ್ತಿತ್ತು. ಅಷ್ಟರಲ್ಲಿ ಕಾರಿನ ಬಾನೆಟ್ ನಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿರುವುದು ಕಂಡು ಬಂದಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಸಂತ್ರಸ್ತ ಚೇತನ್ ಕ್ಯಾಬ್ ಡ್ರೈವರ್ ಆಗಿದ್ದಾನೆ. ಆತ ತನ್ನ ಕಾರಿನಿಂದ ಪ್ರಯಾಣಿಕನನ್ನು ಇಳಿಸಿ ಹಿಂತಿರುಗುತ್ತಿದ್ದಾಗ, ಒಂದು ಕಾರು ಬಂದು ಅವನಿಗೆ ಹಿಂದಿನಿಂದ ಎರಡು-ಮೂರು ಬಾರಿ ಡಿಕ್ಕಿ ಹೊಡೆದಿದೆ. ಅರಿವಾದಾಗ ಅವನು ತನ್ನ ಕಾರಿನಿಂದ ಇಳಿದು ಆರೋಪಿ ಚಾಲಕನ ಕಾರನ್ನು ಮುಂದಕ್ಕೆ ತಳ್ಳಿದ್ದಾನೆ. ಈ ವೇಳೆ ಆರೋಪಿ ಕಾರನ್ನು ಚಲಾಯಿಸಿದ್ದು, ಚೇತನ್ ಬಾನೆಟ್‌ ಹಿಡಿದುಕೊಂಡಿದ್ದಾನೆ. ವಾಹನ ನಿಲ್ಲಿಸುವಂತೆ ಪದೇ ಪದೇ ಮನವಿ ಮಾಡಿದರೂ ಆರೋಪಿ ಚಾಲಕ ಒಪ್ಪದೆ ಕಾರು ಚಲಾಯಿಸಿಕೊಂಡು ಸುಮಾರು 3 ಕಿಮೀ ದೂರ ಸಾಗಿದ್ದಾನೆ.

ಅಷ್ಟರಲ್ಲಿ ಕೆಲ ಪೊಲೀಸರು ದಾರಿಯಲ್ಲಿ ನಿಂತಿರುವುದು ಕಂಡು ಬಂತು. ಚೇತನ್ ಕಾರಿನ ಬಾನೆಟ್‌ನಲ್ಲಿ ನೇತಾಡುತ್ತಿರುವುದನ್ನು ಕಂಡು ಕಾರನ್ನು ಹಿಂಬಾಲಿಸಿ ನಿಲ್ಲಿಸಿದ್ದಾರೆ. ಇದೀಗ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.



Join Whatsapp