ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಮಹಿಳೆಯ ಬ್ಯಾಗ್’​‌ನಲ್ಲಿ 22 ಜೀವಂತ ಹಾವುಗಳು ಪತ್ತೆ!

Prasthutha|

ಚೆನ್ನೈ: ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಮಹಿಳೆಯ ಬ್ಯಾಗ್​‌ನಲ್ಲಿ 22 ಜೀವಂತ ಹಾವುಗಳು ಪತ್ತೆಯಾಗಿದೆ.

- Advertisement -

ಮಲೇಷ್ಯಾದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆಯ ಬಗ್ಗೆ ಅನುಮಾನ ಹುಟ್ಟಿ ಬ್ಯಾಗ್ ತಪಾಸಣೆ ನಡೆಸಿದಾಗ 22 ಜೀವಂತ ಹಾವುಗಳು ಪತ್ತೆಯಾಗಿವೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮಲೇಷ್ಯಾದ ರಾಜಧಾನಿ ಕೌಲಾಲಂಪುರದಿಂದ AK 13 ಸಂಖ್ಯೆಯ ವಿಮಾನದ ಮೂಲಕ ಭಾರತದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯ ಲಗೇಜ್ ತಪಾಸಣೆ ವೇಳೆ ಕಸ್ಟಮ್ ಇಲಾಖೆಯ ತಂಡವು ಹುಡುಕುತ್ತಿರುವಾಗ ಚೀಲದಿಂದ ಹಾವುಗಳು ಹೊರಬರಲು ಪ್ರಾರಂಭಿಸಿದೆ

- Advertisement -

ಎಲ್ಲಾ ಹಾವುಗಳು ವಿವಿಧ ಜಾತಿಯ ಹಾವುಗಳಾಗಿದ್ದು, ಅವುಗಳನ್ನು ವಿವಿಧ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ತರಲಾಗಿದೆ.

“ಕಸ್ಟಮ್ಸ್ ಇಲಾಖೆ ತಂಡವು ಕಸ್ಟಮ್ಸ್ ಆಕ್ಟ್ 1962 ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಚೀಲಗಳನ್ನು ಪರಿಶೀಲಿಸಿದಾಗ 22 ಜೀವಂತ ಹಾವುಗಳು ಮತ್ತು ಒಂದು ಗೋಸುಂಬೆ ಪತ್ತೆಯಾಗಿದೆ” ಎಂದು ಸುದ್ದಿ ಸಂಸ್ಥೆ ANI ಟ್ವಿಟ್ಟರ್‌ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದೆ.



Join Whatsapp