ಮಂಗಳೂರು‌: ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆ‌ ಬೆಂಗರೆಯಲ್ಲಿ ರೋಡ್ ಶೋ ಹಾಗೂ ಬಿರುಸಿನ‌ ಮತ ಯಾಚನೆ

Prasthutha|

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆಯವರು ರೋಡ್ ಶೋ ಮೂಲಕ ಬಿರುಸಿನ ಪ್ರಚಾರ ನಡೆಸಿದರು.‌

- Advertisement -

 ‌‌‌‌‌‌‌‌‌ ಈ ಸಂಧರ್ಭ ರಾಜ್ಯ ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ಮಾಕರ ಸುವರ್ಣ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶಾ ಝಮೀರ್,  ‌‌ಜೆಡಿಎಸ್ ದ.ಕ.‌ಜಿಲ್ಲಾ ಕಾರ್ಯಧ್ಯಕ್ಷ ಇಕ್ಬಾಲ್ ಮೂಲ್ಕಿ,‌ ಬೆಂಗರೆ ವಲಯ ಪಧಾಧಿಕಾರಿಗಳಾದ ಮುಹಮ್ಮದ್  ಬೆಂಗರೆ, ಲತೀಫ್ ಬೆಂಗರೆ, ಮಂಗಳೂರು ದಕ್ಷಿಣ ಜೆಡಿಎಸ್  ಪ್ರ.‌ಕಾರ್ಯದರ್ಶಿ ಅಲ್ತಾಫ್ ತುಂಬೆ, ಕವಿತಾ, ಶಾರದಾ ಶೆಟ್ಟಿ  ಹಾಗೂ ಹಲವು ಕಾರ್ಯಕರ್ತರು , ಬೆಂಗರೆ ವಲಯ ಜೆಡಿಎಸ್ ಯುವ ಕಾರ್ಯಕರ್ತರು ಹಾಗೂ ಪಕ್ಷದ ಹಲವಾರು ಅಭಿಮಾನಿಗಳು ರೋಡ್ ಶೋ ನಲ್ಲಿ ಭಾಗವಹಿಸಿದರು. ಬ್ಯಾಂಡ್ ಮೂಲಕ ನಡೆದ ರೋಡ್ ಶೋ ಆಕರ್ಷಣೀಯವಾಗಿತ್ತು‌ ಮತ್ತು ಜನರಿಂದ ಉತ್ತಮ‌ ಸ್ಪಂದನೆ ದೊರಕಿದೆ.‌



Join Whatsapp