ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ 24 ಲಕ್ಷ ರೂ. ಕಳೆದುಕೊಂಡ ಯುವತಿ!

Prasthutha|

ಮುಂಬೈ: ಆನ್‌ಲೈನ್‌ನಲ್ಲಿ ಹಣ ವಂಚನೆಯ ಹಲವು ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಪುಣೆಯ ಯುವತಿಯೊಬ್ಬಳು ಇಂತಹ ವಂಚನೆಗೆ ಬಲಿಯಾದ ಘಟನೆ ನಡೆದಿದೆ.

- Advertisement -

ಆನ್‌ಲೈನ್ ವಂಚನೆಯಿಂದ ಯುವತಿ ಬರೋಬ್ಬರಿ 24 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕಂಪೆನಿಯೊಂದು ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವ ಕೆಲಸ ನೀಡಿ ಯುವತಿಯಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿದೆ.

ವಂಚನೆಗೊಳಗಾದ ಯುವತಿ ನೇತ್ರ ತಜ್ಞೆಯಾಗಿದ್ದು, ವರ್ಕ್ ಫ್ರಂ ಹೋಮ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆನ್ಲೈನ್ ಕಂಪೆನಿಯೊಂದನ್ನು ಸಂಪರ್ಕಿಸಿದ್ದಾರೆ.

- Advertisement -

ಕಂಪೆನಿ ಯುವತಿಗೆ ನೀಡಿದ ಕೆಲಸವೆಂದರೆ ಯೂಟ್ಯೂಬ್ ವಿಡಿಯೋಗಳನ್ನು ಲೈಕ್ ಮಾಡುವುದಾಗಿತ್ತು. ಮೊದಲ ಹಂತದಲ್ಲಿ ಯುವತಿ 1075 ರೂ. ವೇತನವಾಗಿ ಪಡೆದಿದ್ದಾರೆ. ಈ ರೀತಿ ಯುವತಿಯ ವಿಶ್ವಾಸ ಗಳಿಸುವುದು ಕಂಪನಿಯ ಉದ್ದೇಶವಾಗಿತ್ತು. ಇನ್ನೂ ಹೆಚ್ಚಿನ ಹಣವನ್ನು ಗಳಿಸಲು ಕ್ರಿಪ್ಟೋಕರೆನ್ಸಿ ಸ್ಕೀಮ್ ಮೂಲಕ ಹೂಡಿಕೆ ಮಾಡುವುದು ಉತ್ತಮ ಎಂದು ಕಂಪೆನಿ ಯುವತಿಗೆ ತಿಳಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಈ ಮಾತನ್ನು ನಂಬಿದ ಯುವತಿ ಕಂಪನಿಗೆ ಸೇರಿದ ಎರಡು ಬ್ಯಾಂಕ್ ಖಾತೆಗಳಿಗೆ ಸುಮಾರು 23.8 ಲಕ್ಷ ರೂ. ಪಾವತಿಸಿದ್ದಾರೆ. ನಂತರ ಯುವತಿ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಕಂಪನಿಯು ಹೊಸ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಹಣ ಪಡೆಯಬೇಕಾದರೆ 30 ಲಕ್ಷ ರೂ. ವರೆಗೆ ಪಾವತಿಯಾಗಬೇಕು ಎಂದು ತಿಳಿಸಿದೆ. ಇನ್ನೂ ಹಣ ನೀಡಲು ಯುವತಿ ನಿರಾಕರಿಸಿದಾಗ ಕಂಪೆನಿಯು ತನ್ನ ಸಂಪರ್ಕದಿಂದ ತಪ್ಪಿಸಿಕೊಂಡಿದೆ ಎಂದು ಯುವತಿ ಆರೋಪಿಸಿದ್ದಾರೆ.



Join Whatsapp