ಸಿಡ್ನಿ: ಆಸ್ಟ್ರೇಲಿಯಾದ ಕೇರ್ನ್ಸ್ ನಿಂದ ಉತ್ತರ ಭಾಗಕ್ಕೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರು ಹೊಡೆದಾಡಿದ್ದರಿಂದ ತುರ್ತು ಭೂಸ್ಪರ್ಶ ಮಾಡಿಸಿ ಮೂವರನ್ನು ವಿಮಾನದಿಂದ ಇಳಿಸಿ ಬಂಧಿಸಿದ ಘಟನೆ ನಡೆದಿದೆ.
ಎಎಫ್ ಪಿ- ಆಸ್ಟ್ರೇಲಿಯನ್ ಫೆಡರಲ್ ಪೊಲೀಸರು ಇದನ್ನು ಪುಷ್ಟೀಕರಿಸಿದ್ದಾರೆ.
“ಕೇರ್ನ್ಸ್ ನಿಂದ ಗ್ರೂಟ್ ಎಯ್ಲ್ಯಾಂಡ್ಸ್’ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರ ನಡುವೆ ಸಂಘರ್ಷ ಉಂಟಾಗಿದೆ. ಈ ಬಗ್ಗೆ ನಮಗೆ ಕರೆ ಬಂದುದರಿಂದ ನಾವು ಕೂಡಲೆ ಹೋಗಿ, ವಿಮಾನದವರು ನೀಡಿದ ದೂರಿನಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡೆವು” ಎಂದು ಎಎಫ್ ಪಿ ವಕ್ತಾರರು ತಿಳಿಸಿದರು.
ಈ ಸಂಬಂಧ ವೈರಲ್ ಆಗಿರುವ ವೀಡಿಯೋದಲ್ಲಿ, ನಿಂತು ಗಲಾಟೆ ನಡೆಸಿರುವುದು ಮತ್ತು ಒಬ್ಬ ಬಾಟಲಿಯನ್ನು ಒಬ್ಬ ಪ್ರಯಾಣಿಕನ ತಲೆಯ ಮೇಲೆ ಹಿಡಿದು ಹೊಡೆಯಲು ಯತ್ನಿಸುವುದು ಕಂಡು ಬಂದಿದೆ. ವಿಮಾನದಲ್ಲಿ ಗಲಾಟೆ ನಡೆದುದರಿಂದ ಅದನ್ನು ಕ್ವೀನ್ಸ್ ಲ್ಯಾಂಡ್ ವಿಮಾನ ನಿಲ್ದಾಣಕ್ಕೆ ತಂದು ಇಳಿಸಲಾಯಿತು. ಅಲ್ಲಿ ಮಹಿಳಾ ಪ್ರಯಾಣಿ ಒಬ್ಬರು ದೂರು ನೀಡಿದರು.
ಮತ್ತೊಮ್ಮೆ ವಿಮಾನ ಹಾರಿದಾಗಲೂ ಕೂತಲ್ಲೇ ವಾಗ್ವಾದ ನಡೆಯಿತು. ವಿಮಾನವು ಗ್ರೂಟ್ ಎಯ್ಲ್ಯಾಂಡ್ಸ್ ನ ಅಲ್ಯಂಗುಲ ನಿಲ್ದಾಣದಲ್ಲಿ ಇಳಿದಾಗ ಎನ್ ಟಿ ಪೊಲೀಸರು ಮೂವರನ್ನು ಬಂಧಿಸಿದರು.
ಇತರ ಪ್ರಯಾಣಿಕರಿಗೆ ಅಪಾಯಕಾರಿಯಾಗಿ ವರ್ತಿಸಿದ್ದಾನೆ ಎಂದು 23ರ ಯುವ ಪ್ರಯಾಣಿಕನೊಬ್ಬನ ಮೇಲೆ ಎಫ್’ಐಆರ್ ದಾಖಲಿಸಲಾಗಿದೆ.
ವಸ್ತು ನಾಶ ಮತ್ತು ಸಾರ್ವಜನಿಕವಾಗಿ ಕ್ರಮವಲ್ಲದ ನಡವಳಿಕೆಗಾಗಿ ಓರ್ವ 23ರ ಮಹಿಳೆ ಮೇಲೆ ಪ್ರಕರಣ ದಾಖಲಾಗಿದೆ.
ಇನ್ನೊಬ್ಬ 22ರ ಪ್ರಯಾಣಿಕನ ಮೇಲೆ ಮಾದಕ ವಸ್ತು ಪೂರೈಕೆ, ಮಾದಕ ವಸ್ತು ಹೊಂದಿದ್ದುದು ಮತ್ತು ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಗಿ ಮೊಕದ್ದಮೆ ಗುದ್ದಲಾಗಿದೆ.
ಮೂವರನ್ನೂ ಡಾರ್ವಿನ್ ಲೋಕಲ್ ಕೋರ್ಟಿನಲ್ಲಿ ನಿಲ್ಲಿಸಲಾಯಿತು.