ಇರಾನ್’ನ ಹಿರಿಯ ಧರ್ಮಗುರು ಅಬ್ಬಾಸ್ ಅಲಿ ಸುಲೈಮಾನಿ ಹತ್ಯೆ

Prasthutha|

ಟೆಹ್ರಾನ್: ಕ್ಯಾಸ್ಪಿಯನ್ ಸಮುದ್ರದ ಉತ್ತರ ಪ್ರಾಂತ್ಯದಲ್ಲಿ ಬುಧವಾರ ನಡೆದ ದಾಳಿಯಲ್ಲಿ ಇರಾನ್’ನ ಹಿರಿಯ ಧರ್ಮಗುರುವೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಇರಾನ್’ನ ಮಜಾಂದಾರನ್ ಪ್ರಾಂತ್ಯದ ಬಬೋಲ್ಸರ್’ನಲ್ಲಿ ದಾಳಿಕೋರನೊಬ್ಬ ಅಯಾತುಲ್ಲಾ ಅಬ್ಬಾಸ್ ಅಲಿ ಸುಲೈಮಾನಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ನಂತರ ಪೊಲೀಸರು ದಾಳಿಕೋರನನ್ನು ಬಂಧಿಸಿದ್ದಾರೆ ಎಂದು ಸರ್ಕಾರಿ ಟಿವಿ ವರದಿ ಮಾಡಿದೆ.


ಇರಾನ್’ನ ಸರ್ವೋಚ್ಚ ನಾಯಕನನ್ನು ಮೇಲ್ವಿಚಾರಣೆ ಮಾಡುವ ಮತ್ತು ನೇಮಿಸುವ 88 ಸ್ಥಾನಗಳ ಸಮಿತಿಯಾದ ಅಸೆಂಬ್ಲಿ ಆಫ್ ಎಕ್ಸ್ ಪರ್ಟ್ಸ್ ನಲ್ಲಿ ಸುಲೈಮಾನಿ ಸೇವೆ ಸಲ್ಲಿಸಿದ್ದಾರೆ. ಅವರು ಒಮ್ಮೆ ಇರಾನ್’ನ ಪ್ರಕ್ಷುಬ್ಧ ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಕ್ಕೆ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವೈಯಕ್ತಿಕ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು.

Join Whatsapp