ನವದೆಹಲಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದರಿಂದ ನಾಳೆಯೊಳಗೆ ನಿವಾಸವನ್ನು ಖಾಲಿ ಮಾಡುವಂತೆ ಲೋಕಸಭಾ ಸಚಿವಾಲಯ ಸೂಚಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ.
ದೆಹಲಿಯ ತುಘಲಕ್ ಲೈನ್ ನಲ್ಲಿರುವ ರಾಹುಲ್ ಅವರ ಅಧಿಕೃತ ನಿವಾಸದಿಂದ ಸಾಮಾಗ್ರಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ರಾಹುಲ್ ನಿವಾಸವನ್ನು ನಾಳೆ ಲೋಕಸಭಾ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು.
ಈ ಮಧ್ಯೆ, ಗುಜರಾತ್ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಮುಂದಿನ ವಾರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.