ಪಿಯುಸಿ ಪರೀಕ್ಷೆಯಲ್ಲಿ ಫೇಲ್: ವಿದ್ಯಾರ್ಥಿನಿ ಆತ್ಮಹತ್ಯೆ

Prasthutha|

ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಹಾಸ್ಟೆಲ್ ವೊಂದರಲ್ಲಿ ನಡೆದಿದೆ.

- Advertisement -


ಗುಂಡ್ಲುಪೇಟೆ ಮೂಲದ ವಿಜಯಲಕ್ಷ್ಮಿ ಮೃತ ವಿದ್ಯಾರ್ಥಿನಿ.


ಇಂದು ಪ್ರಕಟಗೊಂಡ ಫಲಿತಾಂಶದಲ್ಲಿ ನಾಲ್ಕು ವಿಷಯಗಳು ಫೇಲಾಗಿದ್ದರಿಂದ ತೀವ್ರ ಮನನೊಂದು ಹಾಸ್ಟೆಲ್ ನಲ್ಲೇ ವಿಜಯಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp