ಆಂತರಿಕ ವಿಷಯ ಸೋರಿಕೆ: ಅಮೆರಿಕ ವಾಯು ಪಡೆಯ ಬಿಳಿಯ ಯುವಕನ ಬಂಧನ

Prasthutha|

ವಾಷಿಂಗ್ಟನ್: ದಶಕದಲ್ಲೇ ಅತಿ ದೊಡ್ಡದು ಎನ್ನಲಾದ ಆಂತರಿಕ ಭದ್ರತೆಯ ಗೌಪ್ಯತೆಗಳನ್ನು ಸೋರಿಕೆ ಮಾಡಿದ ಯುಎಸ್ ವಿಮಾನ ದಳದ 21ರ ಹರೆಯದ ಬಿಳಿ ವರ್ಣೀಯ ಯುವಕನನ್ನು ಬಂಧಿಸಲಾಗಿದೆ.

- Advertisement -


ಈತ ಚಾಲಕ ಪರವಾನಗಿ, ಎಸ್ ಎಸ್ ಎಲ್ ಸಿ ಸರ್ಟಿಫಿಕೇಟಿನ ಸೈಬರ್ ಹರಿವು ವಿಭಾಗದಲ್ಲಿ ಸಿಸ್ಟಮ್ ಜರ್ನಿಮ್ಯಾನ್ ಪ್ರೊಬೆಷನರಿಯಾಗಿ 18 ತಿಂಗಳ ತರಬೇತಿ ಕೆಲಸಕ್ಕೆ ಸೇರಿದ್ದ.


ಮಸಾಚುಸೆಟ್ಸ್ ದಿಗ್ಟನ್ ನ ಜಾಕ್ ಟಿಕ್ಸೇರಾ ಎಫ್ ಬಿಐನಿಂದ ಶುಕ್ರವಾರ ಬಂಧಿತನಾದ ಯುವಕ. ಕ್ರಮವಾಗಿ ಜೋಡಿಸಿಟ್ಟ ಭದ್ರತಾ ಮಾಹಿತಿಗಳನ್ನು ಈತನು ಅಧಿಕೃತನಲ್ಲದೆ ತೆಗೆದು ಹಾಕಿದ್ದಾನೆ, ತೆಗೆದುಕೊಂಡಿದ್ದಾನೆ ಮತ್ತು ರವಾನಿಸಿದ್ದಾನೆ ಎಂದು ಅಟಾರ್ನಿ ಜನರಲ್ ಮೆರಿಕ್ ಗಾರ್ ಲ್ಯಾಂಡ್ ಹೇಳಿದರು.
ಆತ 2019ರಲ್ಲಿ ಏರ್ ನ್ಯಾಷನಲ್ ಗಾರ್ಡ್ ಸೇರಿದ್ದ.

- Advertisement -


ಇಲ್ಲಿ ಏಳುವ ಪ್ರಶ್ನೆಯೆಂದರೆ ತೀರಾ ಕೆಳ ಹಂತದ ಉದ್ಯೋಗಿಯೊಬ್ಬನಿಗೆ ಮಹತ್ವದ ಭದ್ರತಾ ವಿಷಯಗಳಲ್ಲಿ ಕೈಯಾಡಿಸಲು ಸಾಧ್ಯವಾದುದು ಹೇಗೆ?
“ಇದು ಪೆಂಟಗಾನ್ ನ ನಿಜವಾದ ಸಮಸ್ಯೆ. ಅನಪೇಕ್ಷಿತ ಸಿಬ್ಬಂದಿಯಿಂದ ಇಂತಹ ರಾಷ್ಟ್ರೀಯ ಭದ್ರತೆಯ ವಿಷಯಗಳು ನಿರ್ವಹಿಸಲ್ಪಡುವುದು” ಎಂದು ಅಧ್ಯಕ್ಷರ ನಿತ್ಯ ಸುದ್ದಿ ಸಂಕ್ಷಿಪ್ತತೆಯ ಮಾಜಿ ಹಿರಿಯ ಸಂಪಾದಕ ಡೆನಿಸ್ ವೈಲ್ಡರ್ ಹೇಳಿದರು.


ಯುಎಸ್ ಅಧ್ಯಕ್ಷ ಜೋ ಬೈಡನ್ ಕೂಡಲೆ ತಜ್ಞರಿಂದ ಈ ಸೋರಿಕೆಗಳನ್ನು ಹೆಚ್ಚು ಹರಡದಂತೆ ಪಡೆದುಕೊಳ್ಳಲು ಸೂಚಿಸಿದ್ದಾರೆ. ಉಕ್ರೇನ್ ಯುದ್ಧ ಮೊದಲಾದವುಗಳ ಬಗ್ಗೆ ಅಮೆರಿಕ ಹೇಗೆ ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕುತ್ತದೆ ಎನ್ನುವುದೆಲ್ಲ ಇದರಲ್ಲಿ ಇದೆಯೆಂದು ತಿಳಿದು ಬಂದಿದೆ.



Join Whatsapp