ಇಸ್ರೇಲ್ ವಿರುದ್ಧ ಮುಸ್ಲಿಂ ಯುನೈಟೆಡ್ ಫ್ರಂಟ್ ರಚನೆಗೆ ಇಬ್ರಾಹಿಂ ರೈಸಿ ಕರೆ

Prasthutha|

ಟೆಹ್ರಾನ್: ಇಸ್ರೇಲ್ ವಿರುದ್ಧ ಫೆಲೆಸ್ತೀನಿಯರನ್ನು ಬೆಂಬಲಿಸಲು ಒಂದು ಸ್ಥಿರ ಮುಸ್ಲಿಂ ದೇಶಗಳ ಫ್ರಂಟ್ ರಚಿಸುವಂತೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕರೆ ನೀಡಿದ್ದಾರೆ.

- Advertisement -


ಅವರು ಅಲ್ಜೀರಿಯಾದ ಅಧ್ಯಕ್ಷರಾದ ಅಬ್ದುಲ್ ಮಜೀದ್ ಟೆಬೌನ್ ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಇರಾನ್ ಮತ್ತು ಅಲ್ಜೀರಿಯಾಗಳು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ಹೊಂದಿದ್ದು, ಮುಖ್ಯವಾಗಿ ಫೆಲೆಸ್ತೀನ್ ವಿಷಯದಲ್ಲಿ ಅವರ ಹಕ್ಕಿಗಾಗಿ, ರಕ್ಷಣೆಗಾಗಿ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದ ಸಂದರ್ಭದಲ್ಲಿ ಮೇಲಿನ ಮಾತನ್ನೂ ಹೇಳಿದರು. ಇರಾನ್ ಅಧ್ಯಕ್ಷರ ಕಚೇರಿಯ ವೆಬ್ ಪುಟಗಳಲ್ಲಿ ಇದು ಪ್ರಕಟವಾಗಿದ್ದು, ಕ್ಸಿನುವಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.


“ಮುಸ್ಲಿಂ ರಾಷ್ಟ್ರಗಳ ಸಹಕಾರದಿಂದ ಫೆಲೆಸ್ತೀನ್ ದೇಶವು ಇಸ್ರೇಲ್ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರವಾಗುತ್ತದೆ” ಎಂಬ ಆಶಯವನ್ನು ಅಲ್ಜೀರಿಯಾದ ಅಧ್ಯಕ್ಷರು ಈ ಸಂದರ್ಭದಲ್ಲಿ ಹೇಳಿದರು.
ಕಳೆದ ವಾರ ಲೆಬನಾನ್ ಮತ್ತು ಫೆಲೆಸ್ತೀನ್ ಗಡಿಯೆಡೆಗಳಲ್ಲಿನ ಗಾಜಾ ಪಟ್ಟಿಗೆ ಸಂಬಂಧಿಸಿದಂತೆ ಇಸ್ರೇಲ್ ನಡೆಸಿದ ದಾಳಿ ಸಂಬಂಧ ಈ ಫೋನ್ ಮಾತುಕತೆ ನಡೆಯಿತು. ಆದರೆ ದಕ್ಷಿಣ ಲೆಬಾನಾನ್’ನಿಂದ ಉಗ್ರರು ಗಾಜಾ ಪಟ್ಟಿಯತ್ತ ರಾಕೆಟ್ ಹಾರಿಸಿದ್ದರಿಂದ ಇಸ್ರೇಲ್ ವಿಮಾನ ದಾಳಿ ಮಾಡಿತು ಎಂದು ಹೇಳಲಾಗಿದೆ.

- Advertisement -


ಇತ್ತೀಚೆಗೆ ದಾಳಿ ಹೆಚ್ಚಿಸಿರುವ ಇಸ್ರೇಲ್ ಕಳೆದ ವಾರ ಜೆರುಸಲೇಮ್ ಕಾಂಪೌಂಡಿನ ಅಲ್ ಅಕ್ಸಾ ಮಸೀದಿ ಮೇಲೆ ದಾಳಿ ಮಾಡಿತ್ತು. ಇಸ್ರೇಲ್ ಫೆಲೆಸ್ತೀನ್ ತಿಕ್ಕಾಟಕ್ಕೆ ಕಾರಣವಾಗಿರುವ ವಿಷಯಗಳಲ್ಲಿ ಇದು ಕೂಡ ಒಂದು. ಇಸ್ರೇಲ್ ಪೋಲೀಸರ ಹತ್ತಾರು ಮಂದಿ ಫೆಲೆಸ್ತೀನ್ ಆರಾಧಕರ ಮೇಲೆ ಮುಗಿ ಬಿದ್ದರು.
ಅಲ್ ಅಕ್ಸಾ ಮಸೀದಿ ಒಳಗಡೆಗೆ ಒಂದು ಡಜನ್ ನಷ್ಟು ಕಾನೂನು ಭಂಜಕ ಯುವಕರು ಗಲಭೆ ಎಬ್ಬಿಸಲು ನುಗ್ಗಿ ಬಂದದ್ದರಿಂದ ನಾವು ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.



Join Whatsapp