ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ| ಕೇವಲ 10 ದಿನಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳೆಷ್ಟು ಗೊತ್ತೇ?

Prasthutha|

ಬೆಂಗಳೂರು: ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಆಯೋಗ ಭರ್ಜರಿ ಭೇಟೆ ನಡೆಸುತ್ತಿದೆ.

- Advertisement -

ನಗದು ವಹಿವಾಟುಗಳ ಮೇಲೆ ಚುನಾವಣಾ ಆಯೋಗ ನಿಗಾ ಇರಿಸಿದ್ದು ಚೆಕ್​ಪೋಸ್ಟ್​​ಗಳನ್ನು ನಿರ್ಮಿಸಲಾಗಿದೆ. ದಾಖಲೆ ರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತದಾರರಿಗೆ ಆಮಿಷ ಒಡ್ಡಲು ಸಾಗಿಸುತ್ತಿದ್ದ ಗಿಫ್ಟ್​​ಗಳನ್ನೂ ಕೂಡ ಆಯೋಗ ಜಪ್ತಿ ಮಾಡಿಕೊಂಡಿದೆ. ಇದರಂತೆ ಕಳೆದ 10 ದಿನಗಳಲ್ಲಿ ಚುನಾವಣಾ ಆಯೋಗ ಬರೋಬ್ಬರಿ 100 ಕೋಟಿಯಷ್ಟು ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ.

ದೈನಂದಿನ ಬುಲೆಟಿನ್​ ಪ್ರಕಾರ, ಮಾರ್ಚ್​​ 29 ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಅಂದಿನಿಂದ ಇಲ್ಲಿಯವರೆಗು ಒಟ್ಟು 99.18 ಕೋಟಿಯಷ್ಟು ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಕೇವಲ 10 ದಿನಗಳಲ್ಲಿ 36.8 ಕೋಟಿ ರೂ. ಹಣ, 15.46 ಕೋಟಿ ರೂ. ಬೆಲೆಯ ಉಚಿತ ವಸ್ತುಗಳು, 30 ಕೋಟಿ ರೂ. ಬೆಲೆಯ 5.2 ಲಕ್ಷ ಲೀಟರ್​ ಮದ್ಯ, 15 ಕೋಟಿ ರೂ. ಬೆಲೆಯ ಬಂಗಾರ ಮತ್ತು 2.5 ಕೋಟಿ ರೂ. ಬೆಲೆಯ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗವು ಪಾರದರ್ಶಕತೆಗೆ ಒತ್ತು ನೀಡುತ್ತಿದ್ದು, ಸೂಕ್ತ ದಾಖಲೆಗಳಿಲ್ಲದ ನಗದು ಮತ್ತು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಹಂಚಲು ರವಾನಿಸಲಾಗುತ್ತಿದ್ದ ವಸ್ತುಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.



Join Whatsapp