ಬೆಂಗಳೂರು: ನಕಲಿ ಸಿಮ್ ಕಾರ್ಡ್ ಬಳಕೆದಾರರಿಗೆ ಬಿಸಿ ಮುಟ್ಟಿಸಲು ದೂರ ಸಂಪರ್ಕ ಕೆವೈಸಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲು ಮುಂದಾಗಿದೆ.
ಹೊಸ ಮಾನದಂಡಗಳ ಪ್ರಕಾರ ಒಂದೇ ಐಡಿಯಲ್ಲಿ ಖರೀದಿಸುವ ಸಿಮ್ ಕಾರ್ಡ್ ಸಂಖ್ಯೆಯನ್ನ ಒಂಬತ್ತರಿಂದ ಐದಕ್ಕೆ ಮತ್ತು ಕೆವೈಸಿ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಚಿಂತಿಸಿದೆ.
ಸ್ವಯಂ ಕೆವೈಸಿ ಪ್ರಕ್ರಿಯೆ
ಗ್ರಾಹಕರು ಆ್ಯಪ್/ವೆಬ್ಸೈಟ್/ ಪೋರ್ಟಲ್ ಸೇವೆಯ ಮೂಲಕ ಮೊಬೈಲ್ ನಂಬರ್ ನೊಂದಣಿ ಮಾಡಬೇಕು. ರಿಜಿಸ್ಟರ್ ಮಾಡುವ ಮೊಬೈಲ್ ನಂಬರ್ ಕುಟುಂಬದ ಸದಸ್ಯರು/ ಸಂಬಂಧಿಕರಿಗೆ ತಿಳಿದಿರಬೇಕು. ಗ್ರಾಹಕರು ಆ ನಂಬರ್ಗೆ ಓಟಿಪಿ ಪಡೆಯುವಂತಿರಬೇಕು.
ಪಿಒಐ/ಪಿಒಎ ಡ್ಯಾಕುಮೆಂಟ್ ಮೂಲಕ ಎಲೆಕ್ಟ್ರಾನಿಕಲ್ ಧೃಡೀಕರಣ ಪಡೆಯಬಹುದು ಅಥವಾ ಡೆಮೋಗ್ರಾಫಿ ಮಾಹಿತಿಯೊಂದಿಗೆ ಡಿಜಿಲಾಕರ್/ಯುಐಡಿಎಐ ಸಬ್ಸ್ಕ್ರೈಬ್ ವೇರಿಫಿಕೇಶನ್ ಮಾಡಬಹುದು.
ಆಧಾರ್ ಮೂಲಕವು ಚಂದಾದಾರಿಕೆ ಪಡೆದು ವೇರಿಫಿಕೇಶನ್ ಮಾಡಿಸಬಹುದು.
ಯುಐಡಿಎಐ ಡಿಜಿಲಾಕರ್ ಮೂಲಕ ಅಟೋಮ್ಯಾಟಿಕ್ ಗ್ರಾಹಕ ಅಪ್ಲಿಕೇಷನ್ ಫಾರ್ಮ್ ಸಿಗುತ್ತದೆ. ಇದರೊಂದಿಗೆ ಗ್ರಾಹಕ ಫೋಟೋಗ್ರಾಫ್ ಮತ್ತು ವಿಡಿಯೋ ಕೂಡ ಸೆರೆ ಹಿಡಿಯಬಹುದಾಗಿದೆ.