ಕೊಲ್ಕತ್ತಾ: ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಶಾಂತಿಯತ ಹೌಡಾ ಪ್ರದೇಶದಲ್ಲಿ ರಾಮ ನವಮಿ ಹೆಸರಿನಲ್ಲಿ ಗಲಭೆ ನಡೆಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಹೌಡಾ ಗಲಭೆಯಲ್ಲಿ ಮುಸ್ಲಿಮರೂ ಇಲ್ಲ, ಹಿಂದೂಗಳೂ ಇಲ್ಲ. ಅದು ಬಿಜೆಪಿ ಬೆಂಬಲಿಗರ, ಬಜರಂಗ ದಳದವರ ದೊಂಬಿ ಎಂದು ಮಮತಾ ಬ್ಯಾನರ್ಜಿಯವರು ಬೆಂಗಾಲ್ ಟೆಲಿವಿಷನ್ ಜೊತೆಗೆ ಮಾತನಾಡುತ್ತ ಹೇಳಿದರು.
ಈ ಗಲಭೆ ಸಂಬಂಧ 31 ಜನರನ್ನು ಬಂಧಿಸಲಾಗಿದೆ. ಅಂಗಡಿ ಮುಂಗಟ್ಟು ಒಡೆದು ಲೂಟಿ ಮಾಡಿದ್ದಾರೆ ಎಂದು ಅವರು ಹೇಳಿದರು.
ರಾಮ ನವಮಿ ಹಿಂಸಾಚಾರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲೂ ನಡೆದಿದೆ. ಈ ಸಂಬಂಧ ಅಲ್ಲಿ 56 ಜನರನ್ನು ಬಂಧಿಸಲಾಗಿದೆ.
ಗುಜರಾತಿನ ವಡೋದರದಲ್ಲಿ ರಾಮ ನವಮಿ ಮೆರವಣಿಗೆ ಹೊರಟವರು ಕಾರಣವಿಲ್ಲದೆ ಹಲವಾರು ಕಡೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ. ವಡೋದರದ ಕುಂಬಾರವಾಡದಲ್ಲಿ ಪ್ರತ್ಯೇಕ ಕಲ್ಲೆಸೆತ ಪ್ರಕರಣ ನಡೆದಿದೆ. ಒಟ್ಟು 22 ಮಂದಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.