ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಗೆ ಟ್ವಿಟರ್ ಶಾಶ್ವತ ನಿಷೇಧ ಹೇರಿರುವುದು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಬಿಜೆಪಿ ಸಂಸದ, ಪಕ್ಷದ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಅಭಿಪ್ರಾಯ ಪಟ್ಟಿದ್ದಾರೆ. ಅವರು ಇದನ್ನು ಅಮೆರಿಕ ಅಧ್ಯಕ್ಷರಿಗೆ ಮಾಡುತ್ತಾರೆಂದರೆ, ನಾಳೆ ಅದನ್ನು ಯಾರಿಗೆ ಬೇಕಾದರೂ ಮಾಡಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ ಸಾಧ್ಯವಾದಷ್ಟು ಬೇಗ ನಿಯಮಗಳನ್ನು ಈ ಕುರಿತ ನಿಯಮಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಅನಿಯಂತ್ರಿತ ದೊಡ್ಡ ತಂತ್ರಜ್ಞಾನ ಕಂಪೆನಿಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಒಡ್ಡುತ್ತಿರುವ ಅಪಾಯವನ್ನು ಇನ್ನೂ ಅರ್ಥ ಮಾಡಿಕೊಳ್ಳದವರಿಗೆ ಇದು ಎಚ್ಚರಿಕೆಯ ಕರೆಗಂಟೆ. ಅವರು ಇದನ್ನು ಅಮೆರಿಕ ಅಧ್ಯಕ್ಷರಿಗೆ ಮಾಡುತ್ತಾರೆಂದರೆ, ಇನ್ನು ಬೇರೆಯವರಿಗೂ ಮಾಡಬಹುದು. ಈ ಸಂಬಂಧ ಭಾರತ ಇಂಟರ್ ಮೀಡಿಯರಿ ರೆಗ್ಯುಲೇಶನ್ ಗಳನ್ನು ಎಷ್ಟು ಬೇಗ ಪರಾಮರ್ಶಿಸುವುಸುದೋ ಅಷ್ಟು ಬೇಗ, ಅದು ನಮ್ಮ ಪ್ರಜಾಪ್ರಭುತ್ವಕ್ಕೆ ಉತ್ತಮವಾಗಿದೆ ಎಂದು ಸೂರ್ಯ ಹೇಳಿದ್ದಾರೆ.