ಟ್ರಂಪ್ ಗೆ ಟ್ವಿಟರ್ ಶಾಶ್ವತ ನಿಷೇಧ | ನೆಟ್ಟಿಗರ ಸಂಭ್ರಮ; #TrumpBanned ಟ್ರೆಂಡಿಂಗ್!

Prasthutha|

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ‘ಟ್ವಿಟರ್’ ಶಾಶ್ವತ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅವರು ಭಾರೀ ಟ್ರೋಲ್ ಗೊಳಗಾಗಿದ್ದಾರೆ. ಟ್ರಂಪ್ ಗೆ ಟ್ವಿಟರ್ ನಿಷೇಧ ಹೇರಿರುವ ಬಗ್ಗೆ ಅಸಂಖ್ಯಾತ ಮೆಮೆಗಳು ಹರಿದಾಡುತ್ತಿದ್ದು, ನೆಟ್ಟಿಗರು ಈ ನಿರ್ಧಾರಕ್ಕೆ ಭಾರೀ ಸಂಭ್ರಮ ವ್ಯಕ್ತಪಡಿಸಿದ್ದಾರೆ. #TrumpBanned ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.

- Advertisement -

ಇನ್ನೂ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಸಾಧ್ಯತೆಯಿರುವುದರಿಂದ ಟ್ರಂಪ್ ಅವರ ಖಾತೆಗೆ ಟ್ವಿಟರ್ ಶಾಶ್ವತ ನಿರ್ಬಂಧ ಹೇರಿದೆ. ಅಮೆರಿಕದ ಕ್ಯಾಪಿಟಲ್ ಹಿಲ್ ನಲ್ಲಿ ಟ್ರಂಪ್ ಬೆಂಬಲಿಗರು ನಡೆಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ, ಟ್ವಿಟರ್ ಈ ನಿರ್ಧಾರ ಕೈಗೊಂಡಿದೆ.

ಇಲ್ಲಿ ಕೆಲವೊಂದು ಆಯ್ದ ಟ್ವೀಟ್ ಗಳನ್ನು ನೀಡಲಾಗಿದೆ.  

https://twitter.com/egothirlstic/status/1347849163510329350
https://twitter.com/Pierric2005/status/1347836550042804224
Join Whatsapp