ಬಳ್ಳಾರಿ: 23 ವರ್ಷದ ತ್ರಿವೇಣಿ ಅವರು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದು, ಇದೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯರು, ಕಿರಿಯ ವಯಸ್ಸಿನ ಮೇಯರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಇಡೀ ರಾಜ್ಯದಲ್ಲೇ ಕಿರಿಯ ವಯಸ್ಸಿನಲ್ಲಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಖ್ಯಾತಿಗೆ ತ್ರಿವೇಣಿ ಅವರು ಭಾಜನರಾಗಿದ್ದಾರೆ.
ಬಳ್ಳಾರಿಯ 4ನೇ ವಾರ್ಡ್ ನ ಸದಸ್ಯೆ ತ್ರಿವೇಣಿ ಅವರು ಮೇಯರ್ ಪಟ್ಟ ಅಲಂಕರಿಸಿ ದಾಖಲೆ ಬರೆದಿದ್ದಾರೆ. ಉಪಮೇಯರ್ ಆಗಿ 33ನೇ ವಾರ್ಡ್ ನ ಜಾನಕಮ್ಮ ಆಯ್ಕೆಯಾಗಿದ್ದಾರೆ. ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯೆಯಾಗಿ ಆಯ್ಕೆ ಆಗಿದ್ದೆ. ಇದೀಗ ಮೇಯರ್ ಆಗಿದ್ದೇನೆ. ತುಂಬಾ ಖುಷಿಯಾಗಿದೆ. ಎಲ್ಲರ ಜೊತೆಗೂಡಿ ಪಾಲಿಕೆಯ ಅಭಿವೃದ್ಧಿ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇನೆ ಎಂದು ತ್ರಿವೇಣಿ ತಿಳಿಸಿದರು.