ನವದೆಹಲಿ: ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಸಶಾ ಹೆಸರಿನ ಹೆಣ್ಣು ಚಿರತೆ ಮೂತ್ರಪಿಂಡದ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ.
ನಮೀಬಿಯಾದಿಂದ ತಂದ ಎಂಟು ಚೀತಾಗಳಲ್ಲಿ ಒಂದು ಚೀತಾವು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿದೆ. “ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಸಶಾ ಹೆಸರಿನ ಹೆಣ್ಣು ಚಿರತೆ ಮೂತ್ರಪಿಂಡದ ಸೋಂಕಿನಿಂದ ಸೋಮವಾರ ಮೃತಪಟ್ಟಿದೆ” ಎಂದು ಹಿರಿಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
“ಶವ ಪರೀಕ್ಷೆಯು ಸಾವಿನ ನಿಜವಾದ ಕಾರಣವನ್ನು ಬಹಿರಂಗಪಡಿಸಲಿದೆ” ಎಂದು ಅವರು ಹೇಳಿದರು. ಭಾರತೀಯ ಅರಣ್ಯ ಅಧಿಕಾರಿಗಳು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಸೆಪ್ಟೆಂಬರ್ 17ರಂದು ಭಾರತಕ್ಕೆ ಎಂಟು ಚೀತಾಗಳನ್ನು ನಮೀಬಿಯಾದಿಂದ ತರಲಾಗಿತ್ತು. ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಅವುಗಳಲ್ಲಿ ಎರಡು ಗಂಡು ಚೀತಾಗಳನ್ನು ನವೆಂಬರ್’ನಲ್ಲಿ ಕ್ವಾರಂಟೈನ್ನಿಂದ ಬಿಡುಗಡೆ ಮಾಡಲಾಗಿತ್ತು.
ನಮೀಬಿಯಾದಿಂದ ಕುನೋ ಉದ್ಯಾನವನಕ್ಕೆ ತಂದಿದ್ದ ಚೀತಾ ಸಾವು
Prasthutha|