ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ: ಯತ್ನಾಳ್’ಗೆ ತಿರುಗೇಟು ನೀಡಿದ ಅಬ್ದುಲ್ ಲತೀಫ್

Prasthutha|

ಬೆಂಗಳೂರು: ಮುಸ್ಲಿಮರು ಮೂರು ಕಡೆ ಲಾಭ ಪಡೆಯುತ್ತಿದ್ದಾರೆ, ಮೀಸಲಾತಿ ಇವರಪ್ಪನ ಮನೆಯದ್ದಾ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದಿರುವ ಎಸ್’ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು, ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ, ಕೊಟ್ಟಿಲ್ಲ ಅಂದ್ರೆ ಪಡಕೊಳ್ಳುವ ರೀತಿ ಗೊತ್ತು ಕಣೋ ಬಸವನಗೌಡ ಪಾಟೀಲ್ ಯತ್ನಾಳ್. ಮೀಸಲಾತಿ ನಿಮ್ಮಪ್ಪನದ್ದು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

- Advertisement -

ಮುಸ್ಲಿಮರು ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಒಂದೇ ಕಡೆ ಲಾಭ ಸಿಗಬೇಕು. ಮೀಸಲಾತಿ ಇವರಪ್ಪನ ಮನೆಯದಾ ಎಂದು ಮೀಸಲಾತಿ ಕಡಿತ ವಿಚಾರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಬ್ದುಲ್ ಲತೀಫ್, ಕರ್ನಾಟಕ ರಾಜ್ಯವೇನು ಬಸವನಗೌಡ ಯತ್ನಾಳನ ಪಿತ್ರಾರ್ಜಿತ ಆಸ್ತಿ ಅಲ್ಲ. ಈ ರಾಜ್ಯದ ಅವಕಾಶಗಳಲ್ಲಿ ಮುಸಲ್ಮಾನರ ಪಾಲು ಇದೆ, ಅದು ನಮ್ಮ ಹಕ್ಕಾಗಿದೆ, ನೀವು ನೀಡುವ ಭಿಕ್ಷೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.



Join Whatsapp