ಹಾಸನ: ವಿಮೆನ್ ಇಂಡಿಯಾ ಮೂವ್ಮೆಂಟ್ ಹಾಸನ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷೆಯಾಗಿ ರೂಬಿ ವಾಹಿದ್, ಉಪಾಧ್ಯಕ್ಷೆಯಾಗಿ ಸಾಝಿಯಾ ಆಯ್ಕೆಯಾಗಿದ್ದಾರೆ.
ಹಾಸನದ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಸಾಯಿರಾ ಬಾನು, ಕಾರ್ಯದರ್ಶಿಯಾಗಿ ರೂಹಿನಾ ಮತ್ತು ಕೋಶಾಧಿಕಾರಿಯಾಗಿ ಸಲ್ಮಾ ವಾಹಿದ್ ಹಾಗೂ ಸಮಿತಿ ಸದಸ್ಯರಾಗಿ ಅಸ್ಮತ್, ರೆಹನಾ, ರುಖಿಯ್ಯಾ, ರುಖಿಯ್ಯಾ ಜಿ, ಹೀನಾ ಕೌಸರ್, ಝೊಹರಾ ಅವರು ಆಯ್ಕೆಯಾಗಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್’ಡಿಪಿಐ ಜಿಲ್ಲಾಧ್ಯಕ್ಷ ಸಿದ್ದೀಕ್ ಆನೆಮಹಲ್, ಪುರುಷರಷ್ಟೇ ಸಮಾನವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡಬಲ್ಲರೆಂದು ಹಾಸನದ ಮಹಿಳೆಯರು ಈ ಹಿಂದೆ ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ಸಂಘಪರಿವಾರದ ವಿಚ್ಛಿದ್ರಕಾರಿ ಮನಸ್ಥಿತಿ ವಿರುದ್ಧ ರಸ್ತೆಗಿಳಿದು ಹಲವು ಬಾರಿ ಪ್ರತಿಭಟಿಸಿ ರಾಜ್ಯಕ್ಕೆ ಮಾದರಿಯಾದ ಮಹಿಳೆಯರು ಇಂದು ಸಮಾಜದ ಅನ್ಯಾಯವನ್ನು ಎದುರಿಸಲು ಒಂದು ವೇದಿಕೆಯಲ್ಲಿ ಕೆಲಸ ಮಾಡಲು ಸಿದ್ದರಾಗಬೇಕೆಂದು ಕರೆಕೊಟ್ಟರು.
ಜಿಲ್ಲಾ ಸಮಿತಿಯನ್ನು ರಚಿಸುವ ಉದ್ದೇಶ ಮತ್ತು ಜವಾಬ್ದಾರಿಯನ್ನು ವಿಮ್ ರಾಜ್ಯಾಧ್ಯಕ್ಷರಾದ ಫಾತಿಮಾ ನಸೀಮಾರವರು ವಿವರವಾಗಿ ತಿಳಿಸಿದರಲ್ಲದೇ, ರಾಜಕೀಯದಲ್ಲಿ ಮಹಿಳೆಯರ ಸಬಲೀಕರಣದ ಅಗತ್ಯತೆ ಮತ್ತು ಪರಿಣಾಮಗಳ ಬಗ್ಗೆ ವಿವರಿಸಿದರು.
ಎಸ್’ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಫರೀದ್ ವಂದಿಸಿ, ಸಾಯಿರಾ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು. ವಿಮ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿಮ್ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವಿಮೆನ್ ಇಂಡಿಯಾ ಮೂವ್’ಮೆಂಟ್ ಹಾಸನ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ
Prasthutha|