ಪ್ರಧಾನಿ ಮೋದಿ ಟೀಕಿಸುವ ಪೋಸ್ಟರ್: 100 FIR, ಆರು ಮಂದಿಯ ಬಂಧನ

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಪೋಸ್ಟರ್’ಗಳನ್ನು ನಗರದಾದ್ಯಂತ ಅಂಟಿಸಿದ ಆರು ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 100 ಎಫ್’ಐಆರ್’ಗಳನ್ನು ಸಹ ದಾಖಲಿಸಿದ್ದಾರೆ.
ನಗರದ ಎಎಪಿ ಕಚೇರಿಯಿಂದ ಹೊರಬರುತ್ತಿದ್ದ ವ್ಯಾನ್ ಅನ್ನು ಸಹ ಪೊಲೀಸರು ತಡೆದಿದ್ದಾರೆ. ವ್ಯಾನ್ ನಿಂದ ಪೋಸ್ಟರ್’ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಮತ್ತು ಕೆಲವು ಪ್ರಯಾಣಿಕರನ್ನು ಸಹ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
“ಪೋಸ್ಟರ್’ಗಳಲ್ಲಿ ಮುದ್ರಣಾಲಯದ ವಿವರಗಳಿಲ್ಲ” ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಿಂಟಿಂಗ್ ಪ್ರೆಸ್ ಕಾಯ್ದೆ ಮತ್ತು ಆಸ್ತಿಯ ವಿರೂಪಗೊಳಿಸುವಿಕೆ ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

Join Whatsapp