ಲಂಡನ್: ಲಂಡನ್ನಿನಲ್ಲಿರುವ ಭಾರತದ ರಾಯಭಾರ ಕಚೇರಿಯ ಹೊರ ಭಾಗದಲ್ಲಿ ಭಾರೀ ಗಾತ್ರದ ಭಾರತದ ರಾಷ್ಟ್ರ ಧ್ವಜದೊಡನೆ ಕಂಗೊಳಿಸಿ ಎಲ್ಲರ ಗಮನ ಸೆಳೆಯಿತು.
ಅಮೃತ್ ಪಾಲ್ ಸಿಂಗ್ ಅವರ ಬಂಧನ ವಿರೋಧಿಸಿ ಖಲಿಸ್ತಾನಿವಾದಿಗಳು ಭಾರತದ ಬಾವುಟ ಎಳೆದು, ಅವರ ಕೊಡಿ ಏರಿಸಿದ ಕೆಲವೇ ಹೊತ್ತಿನಲ್ಲಿ ಖಲಿಸ್ತಾನಿ ಧ್ವಜ ಇಳಿಸಿ ಭಾರತದ ಬಾವುಟ ಏರಿಸುವಲ್ಲಿ ಯಶಸ್ವಿಯಾಯಿತು.
ಲಂಡನ್ನಿನ ಆಲ್ಡ್ ವಿಕ್ ರಸ್ತೆಯಲ್ಲಿರುವ ಇಂಡಿಯಾ ಹೌಸ್ ನಲ್ಲಿ ಹಿಂದಿನದಕ್ಕಿಂತ ದೊಡ್ಡ ಭಾರತದ ಬಾವುಟ ಹಾರಾಡುವುದನ್ನು ಹಲವರು ತಮ್ಮ ಜಾಲ ಪುಟಗಳಲ್ಲಿ ಹಂಚಿಕೊಂಡಿದ್ದಾರೆ.
ಮೊನ್ನೆ ಖಲಿಸ್ತಾನಿವಾದಿಯೊಬ್ಬ ಇಂಡಿಯಾ ಹೌಸ್ ನ ಹೊರಗಿದ್ದ ಭಾರತದ ರಾಷ್ಟ್ರ ಧ್ವಜವನ್ನು ಎಳೆದು ಹಾಕಿದ್ದು ಭಾರೀ ಖಂಡನೆಗೆ ಒಳಗಾಗಿತ್ತು. ರಾಯಭಾರ ಕಚೇರಿಯ ಅಧಿಕಾರಿಗಳು ಖಲಿಸ್ತಾನ್ ಧ್ವಜ ಕಿತ್ತು ಹಾಕುವುದನ್ನು ಕಂಡು ತುಂಬ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
“ಜಂಡಾ ಊಂಚಾ ರಹೇ ಹಮಾರಾ, ಪಂಜಾಬಿಗಳು ಭಾರತದಲ್ಲಾಗಲಿ, ಬ್ರಿಟನ್’ನಲ್ಲಾಗಲಿ ದೇಶದ ಗೌರವವನ್ನು ಸದಾ ಕಾಲ ಎತ್ತಿ ಹಿಡಿದಿದ್ದಾರೆ. ಬೆರಳೆಣಿಕೆಯಷ್ಟು ಜನರು ಖಲಿಸ್ತಾನ್ ಹೆಸರಿನಲ್ಲಿ ಲಂಡನ್ನಿನಲ್ಲಿ ಕುಳಿತು ಕೀಟಲೆ ಮಾಡುವವರು ಪಂಜಾಬನ್ನು ಪ್ರತಿನಿಧಿಸುವುದಿಲ್ಲ” ಎಂದು ಲಂಡನ್ ಹೌಸ್ ಎದುರು ಹಾರುವ ಭಾರತದ ಧ್ವಜದ ಫೋಟೋ ಹಾಕಿ ಬಿಜೆಪಿ ರಾಷ್ಟ್ರೀಯ ವಕ್ತಾರ ಜೈವೀರ್ ಶೇರ್ಗಿಲ್ ಟ್ವೀಟ್ ಮಾಡಿದ್ದಾರೆ.
ಲಂಡನ್ ರಾಯಭಾರಿ ಕಚೇರಿಯಲ್ಲಿ ಖಲಿಸ್ತಾನ್ ಬಾವುಟ ಇಳಿಸಿ ಭಾರತದ ಧ್ವಜ ಹಾರಿಸಿದ ಅಧಿಕಾರಿಗಳು
Prasthutha|