ನಟ ರಜನಿಕಾಂತ್ ಮಗಳು ಐಶ್ವರ್ಯಾ ಮನೆಯಲ್ಲಿ ಕಳ್ಳತನ: ದೂರು ದಾಖಲು

Prasthutha|

ಬೆಂಗಳೂರು: ತಮಿಳು ನಟ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನವಾಗಿದ್ದು, ತೆನಾಂಪೇಟೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ.

- Advertisement -


ಚೆನ್ನೈನ ಮನೆಯ ಲಾಕರ್ ನಲ್ಲಿದ್ದ 60 ಪವನ್ ಚಿನ್ನ ಮತ್ತು ವಜ್ರದ ಆಭರಣಗಳು ನಾಪತ್ತೆಯಾಗಿದೆ.


ಎಫ್ ಐಆರ್ ಪ್ರಕಾರ ’60 ಪವನ್ ಚಿನ್ನ, ಮೂರು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು, ವ್ರಜದ ಆಭರಣ ಹಾಗೂ ಸಹೋದರಿಯ ಮದುವೆಗೆ ಬಳಸಿದ್ದ ಒಡವೆಗಳನ್ನೂ ಕಳ್ಳರು ದೋಚಿದ್ದಾರೆ. ಫೆಬ್ರವರಿ 10 ರಂದು ಐಶ್ವರ್ಯ ಲಾಕರ್ ತೆರೆದಾಗ ಆಭರಣಗಳು ಮಾಯವಾಗಿದ್ದರ ಬಗ್ಗೆ ಗೊತ್ತಾಗಿದೆ. ಆಘಾತಗೊಂಡ ಅವರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

- Advertisement -


ವಜ್ರದ ಸೆಟ್, ಪುರಾತನ ಕಾಲದ ಚಿನ್ನಾಭರಣ, ಬಳೆಗಳು, ನವರತ್ನ ಸೆಟ್ ಗಳು ಹೀಗೆ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ಅಷ್ಟೂ ಆಭರಣಗಳು ಕಳುವು ಆಗಿವೆ ಎಂದು ಹೇಳಲಾಗುತ್ತಿದೆ. ದೂರಿನ ಪ್ರತಿಯಲ್ಲಿ ಹಲವು ವರ್ಷಗಳಿಂದ ಲಾಕರ್ ನೋಡಿರಲಿಲ್ಲ. ಈಗ ನೋಡಿದಾಗ ಆಭರಣವಿಲ್ಲ ಎಂದು ಗೊತ್ತಾಗಿದೆ ಎಂದು ಅವರು ದೂರು ನೀಡಿದ್ದಾರೆ.

Join Whatsapp