ತಮಿಳುನಾಡಿನಲ್ಲಿ ಎಐಎಡಿಎಂಕೆ – ಬಿಜೆಪಿ ಮೈತ್ರಿಯಲ್ಲಿ ಬಿರುಕು

Prasthutha|

ಚೆನ್ನೈ: ಕಳೆದ ವಾರ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ-ಎಐಎಡಿಎಂಕೆ ತನ್ನ ಮಿತ್ರ ಪಕ್ಷ ಬಿಜೆಪಿಯ ಹಲವಾರು ಪ್ರಮುಖರನ್ನು ತನ್ನತ್ತ ಸೆಳೆದುಕೊಂಡಿದೆ.

- Advertisement -


2019ರಿಂದ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿ ಪಕ್ಷಗಳಾಗಿ ಮುನ್ನಡೆಯುತ್ತಿವೆ. ಆದರೆ ಅದು ಅಷ್ಟೇನೂ ರಾಜಕೀಯ ಫಲ ನೀಡಿಲ್ಲ. ಇದರ ನಡುವೆ ಬಿಜೆಪಿಯು ತಮಿಳುನಾಡಿನಲ್ಲಿ ಪ್ರಮುಖ ಪಾತ್ರ ವಹಿಸುವುದಾಗಿ ಹೇಳಿಕೆ ನೀಡುತ್ತಲೇ ಇದೆ. ಬಿಜೆಪಿಯ ಬೆಳವಣಿಗೆ ನಮ್ಮ ಪಕ್ಷದ ವಶೀಲಿಯಿಂದ ಆಗಬೇಕು ಎಂಬುದು ಎಡಿಎಂಕೆ ಅಭಿಮತ. ಇದು ಮೈತ್ರಿಯ ಮೇಲೆ ದುಷ್ಪರಿಣಾಮ ಬೀರಿದ್ದು ಅದು ಮುರಿಯುವ ಹಂತಕ್ಕೆ ಬಂದು ಮುಟ್ಟಿದೆ.


ಕಳೆದ ಭಾನುವಾರ ಬಿಜೆಪಿಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಎಡಿಎಂಕೆ ಸೇರಿದರು. ಅದಾದ ಮುಂದಿನ ಮೂರು ದಿನಗಳಲ್ಲಿ ಭಾಜಪದ ಮತ್ತೆ ನಾಲ್ವರು ಪದಾಧಿಕಾರಿಗಳು ಎಡಿಎಂಕೆ ಸೇರಿದರು.
ಬಿಜೆಪಿಯ ಐಟಿ ವಿಭಾಗದ 13 ಸದಸ್ಯರು ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರೂ ಎಐಎಡಿಎಂಕೆ ಸೇರುವ ವರದಿ ಇದೆ.
ಇದರಿಂದ ಕೆರಳಿದ ಬಿಜೆಪಿಯವರು ಬುಧವಾರ ಎಐಡಿಎಂಕೆ ಮುಖ್ಯಸ್ಥ ಇ. ಕೆ. ಪಳನಿಸ್ವಾಮಿಯವರ ಫೋಟೋವನ್ನು ಪ್ರತಿಭಟನಾರ್ಥ ಸುಟ್ಟಿದ್ದಾರೆ ಮತ್ತು ಮೈತ್ರಿ ಧರ್ಮ ಮುರಿದಿರುವುದಾಗಿ ಆಪಾದನೆ ಮಾಡಿದ್ದಾರೆ.

- Advertisement -


ಎಐಎಡಿಎಂಕೆ – ಬಿಜೆಪಿ ಮೈತ್ರಿಗೆ ದೊಡ್ಡ ಇತಿಹಾಸವೇ ಇದೆ. ಆ ಪಕ್ಷಗಳು ಹಿಂದೆ 1998- 1899ರಲ್ಲಿ ಕೇಂದ್ರದಲ್ಲಿ ಮೈತ್ರಿ ಸಾಧಿಸಿದ್ದವು. ಮತ್ತೆ 2004ರಲ್ಲಿ ಲೋಕ ಸಭಾ ಚುನಾವಣೆಗೆ ಮೈತ್ರಿ ಕೂಡಿದ್ದವು. ಆದರೆ 2014ರಲ್ಲಿ ಮತ್ತೆ ಕೇಸರಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದಾಗ ಎಐಎಡಿಎಂಕೆ ಅದರಲ್ಲಿ ಸೇರಿಕೊಳ್ಳಲಿಲ್ಲ.
2016ರ ಡಿಸೆಂಬರ್ ನಲ್ಲಿ ಜಯಲಲಿತ ಮರಣ ಹೊಂದಿದಾಗ ಎಡಿಎಂಕೆಯ ವಿವಿಧ ಬಣಗಳು ಅಧಿಕಾರದಲ್ಲಿದ್ದ ಪಕ್ಷದ ಮೇಲೆ ಹಿಡಿತ ಸಾಧಿಸಲು ಮೇಲಾಟ ಸಾಧಿಸಿದವು. ಇದರ ನಡುವೆ ಎನ್’ಡಿಎ ಸೇರದೆಯೇ ಎಡಿಎಂಕೆ ಕೇಂದ್ರದ ಬಿಜೆಪಿಗೆ ಹೊರಗಿನಿಂದ ಬೆಂಬಲ ನೀಡಿತು. ಇದು ಜಯಲಲಿತ – ಮೋದಿಯವರ ಆಶಯ ಎಂದು ಹೇಳಲಾಯಿತು.
ಮುಂದೆ 2019ರ ಲೋಕ ಸಭಾ ಚುನಾವಣೆಯನನ್ನು ಮೋದಿಯವರ ನಾಯಕತ್ವದಲ್ಲಿ ಹಾಗೂ 2021ರ ವಿಧಾನ ಸಭಾ ಚುನಾವಣೆಯನ್ನು ಪಳನಿಸ್ವಾಮಿ ಮತ್ತು ಒ. ಪನ್ನೀರ್ ಸೆಲ್ವನ್ ನಾಯಕತ್ವದಲ್ಲಿ ಎದುರಿಸಲು ಎರಡು ಪಕ್ಷಗಳು ಒಪ್ಪಂದ ಮಾಡಿಕೊಂಡವು.


ಆದರೆ ಮತ್ತೂ ಹಲವು ಮರಿ ಪಕ್ಷಗಳ ಒಕ್ಕೂಟ ಗೆಲ್ಲಲಿಲ್ಲ. ತಮಿಳುನಾಡು ಪಾಂಡಿಚೇರಿಯ 40 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಕೂಟಕ್ಕೆ ಸಿಕ್ಕಿದ್ದು ಒಂದು ಮಾತ್ರ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮೈತ್ರಿಕೂಟವು 234 ಕ್ಷೇತ್ರಗಳಲ್ಲಿ 66 ಕಡೆ ಗೆಲುವು ಸಾಧಿಸಿತು. ಪಾಂಡಿಚೇರಿಯಲ್ಲಿ ಎಐಎಡಿಎಂಕೆಗೆ ಮೊದಲ ಬಾರಿಗೆ ಒಂದೂ ಸ್ಥಾನ ಸಿಗಲಿಲ್ಲ. ಕಾಂಗ್ರೆಸ್ಸಿನಿಂದ ಬಂದಿದ್ದವರು ಬಿಜೆಪಿಯಾಗಿ ಮತ್ತೊಂದು ಸ್ಥಳೀಯ ಪಕ್ಷ ನಮದು ರಾಜಿಯಂ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಬಿಜೆಪಿ ಪಾಂಡಿಚೇರಿಯಲ್ಲಿ ಸರಕಾರ ರಚಿಸಿತು.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಎಐಎಡಿಎಂಕೆ ಇಷ್ಟೆಲ್ಲ ಎಳೆದುಕೊಂಡ ಬಳಿಕವೂ “ಎಐಎಡಿಎಂಕೆ – ಬಿಜೆಪಿ ಮೈತ್ರಿಯು ಇನ್ನಷ್ಟು ಕಾಲ ಮುಂದುವರಿಯಬೇಕು” ಎಂದು ಹೇಳಿದ್ದಾರೆ.



Join Whatsapp