ಪೋಷಕರು – ಶಾಲಾ ಆಡಳಿತ ಮಂಡಳಿಯ ನಡುವೆ ಜಗಳ: ರಾಯಲ್ ಕಾನ್ ಕಾರ್ಡ್ ಶಾಲೆ ವಿರುದ್ಧ ಕೇಸ್

Prasthutha|

ಮೈಸೂರು: ರಾಯಲ್ ಕಾನ್ ಕಾರ್ಡ್ ಇಂಟರ್ ನ್ಯಾಷನಲ್ ಶಾಲೆ ವಿವಾದಕ್ಕೆ ಸಂಬಂಧಿಸಿ ಶಾಲಾ ಆಡಳಿತ ಮಂಡಳಿ ವಿರುದ್ದ ಜೆಜೆ ಆ್ಯಕ್ಟ್ (ಬಾಲಾಪರಾಧಿ ಕಾಯಿದೆ)ಅಡಿ ಪ್ರಕರಣ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -


ಪ್ರಿನ್ಸಿಪಾಲ್ ಖುಷಿ, ಮ್ಯಾನೇಜರ್ ಹರೀಶ್, ಶಾಲಾ ನಿರ್ದೇಶಕ ರಾಕೇಶ್ ರಾಜೇ ಅರಸ್ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ಕಳೆದ ಮಾರ್ಚ್ 6ರಂದು ನಡೆದ ಗಲಾಟೆಗೆ ಸಂಬಂಧಿಸಿ ಚೆಲುವೇಗೌಡ, ಸಿದ್ದೇಗೌಡ ಹಾಗೂ ಮೂವರು ವಿದ್ಯಾರ್ಥಿಗಳು ದೂರು ನೀಡಿದ್ದರು.


ಬೋಗಾದಿ ಎರಡನೇ ಹಂತದಲ್ಲಿರುವ ರಾಯಲ್ ಕಾನ್ ಕಾರ್ಡ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಾರ್ಚ್ 6ರಂದು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ನಡುವೆ ಗಲಾಟೆಯಾಗಿತ್ತು. ಶಾಲೆಯ ಆಡಳಿತ ಮಂಡಳಿ ಶಾಲೆಯ 16 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಈ ವಿಚಾರ ತಿಳಿದು ಪೋಷಕರು ಶಾಲೆಯ ಆಡಳಿತ ಮಂಡಳಿ ಜೊತೆ ಜಗಳವಾಡಿದ್ದರು. ಈ ವೇಳೆ ಶಾಲೆಯ ಮ್ಯಾನೇಜರ್ ಹರೀಶ್ ಅವರಿಗೆ ಹಿಗ್ಗಾಮುಗ್ಗ ಥಳಿಸಲಾಗಿತ್ತು. ಮತ್ತೊಂದು ಕಡೆ ಮಕ್ಕಳಿಗೆ ಪರೀಕ್ಷೆ ಕೊಡದೆ ಇರುವುದನ್ನು ಪೋಷಕ ಸಿದ್ದೇಗೌಡ ಪ್ರಶ್ನಿಸಿದ್ದರು. ಇದಕ್ಕೆ ಕೆಂಡಾಮಂಡಲರಾದ ಶಾಲೆಯ ಪ್ರಾಂಶುಪಾಲರಾದ ಖುಷಿ ಸಿದ್ದೇಗೌಡ ಕೊರಳಪಟ್ಟಿ ಹಿಡಿದು ಎಳೆದಾಡಿದ್ದರು.

- Advertisement -


ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸರಸ್ವತಿ ಪುರಂ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದರು. ಶಾಲಾ ಆಡಳಿತ ಮಂಡಳಿ ಹಾಗೂ 16 ವಿದ್ಯಾರ್ಥಿಗಳ ಪೋಷಕರ ನಡುವೆ ಶಾಲಾ ಶುಲ್ಕದ ವಿಚಾರವಾಗಿ ಗೊಂದಲ ಉಂಟಾಗಿದೆ. ಶಾಲಾ ಆಡಳಿಯ ಪ್ರಕಾರ 1 ಲಕ್ಷದ 10 ಸಾವಿರ ಕಟ್ಟಬೇಕು. ಆದರೆ ಪೋಷಕರ ಪ್ರಕಾರ 82 ಸಾವಿರ ಶುಲ್ಕ ಕಟ್ಟಬೇಕು. ಇದೇ ವಿಚಾರ ಹೈ ಕೋರ್ಟ್ ಮೆಟ್ಟಿಲೇರಿದೆ.



Join Whatsapp