ಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ ಟ್ಯಾಂಕರ್​ಗಳಲ್ಲಿ ಗ್ಯಾಸ್ ಸೋರಿಕೆ

Prasthutha|

ಮಂಗಳೂರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್​ನಿಂದ (HPCL) ಟ್ಯಾಂಕರ್​ಗಳಲ್ಲಿ ಗ್ಯಾಸ್ ತುಂಬಿಸಿ ಮಂಗಳೂರಿನಿಂದ ರೈಲು ಮೂಲಕ ಸಾಗಿಸುತ್ತಿದ್ದಾಗ ಗ್ಯಾಸ್ ಸೋರಿಕೆಯುಂಟಾಗಿದ ಘಟನೆ ನಡೆದಿದೆ..

- Advertisement -

ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಮಂಗಳೂರಿನಿಂದ 7 ಕಿ.ಮೀ ದೂರ ತೆರಳಿದ ರೈಲು ವಾಪಸ್ ಹೆಚ್​​ಪಿಸಿಎಲ್​ಗೆ ಆಗಮಿಸಿದೆ. ಮಂಗಳೂರಿನಿಂದ ಸರಕು ಸಾಗಣೆ ರೈಲಿನಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್​ಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಕೆಲವೊಂದು ಟ್ಯಾಂಕರ್​ಗಳಲ್ಲಿ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನಲೆ ತಕ್ಷಣ ಹೆಚ್​ಪಿಸಿಎಲ್​ಗೆ ಹಿಂತಿರುಗಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಪ್ರಯಾಣಿಸಿದ 7 ಕಿಲೋ ಮೀಟರ್ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾದ ಹಿನ್ನಲೆ ಜೋಕಟ್ಟೆ ಬಳಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸುದ್ದಿ ತಿಳಿದ ಸ್ಥಳೀಯರು ಆತಂಕಗೊಂಡಿದ್ದಾರೆ. ಮುಂಜಾಗೃತಾ ಕ್ರಮವಾಗಿ ರೈಲ್ವೇ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ ಮಾಡಲಾಗಿದ್ದು, ರೈಲ್ವೆ ಹಳಿ ಸುತ್ತಮುತ್ತ ಸಾರ್ವಜನಿಕರು ಬಾರದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.



Join Whatsapp