“ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದ್ದಾನೆ ತಾನೇ” ಎಂದು ಮಹಿಳೆಗೆ ಗದರಿದ ಬಿಜೆಪಿ ಸಂಸದ: ವ್ಯಾಪಕ ಆಕ್ರೋಶ

Prasthutha|

ಕೋಲಾರ: “ಹಣೆಗೆ ಕುಂಕುಮ ಯಾಕಿಟ್ಟಿಲ್ಲ, ಗಂಡ ಬದುಕಿದ್ದಾನೆ ತಾನೇ” ಎಂದು ಮಹಿಳೆಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೇ  ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಅವಮಾನ ಮಾಡಿರುವ ಆಘಾತಕಾರಿ ಘಟನೆ ಕೋಲಾರದಲ್ಲಿ ನಡೆದಿದೆ.

- Advertisement -

 ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಎಕ್ಸ್‌’ಪೋದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

 ಅಂತಾರಾಷ್ಟ್ರೀಯ ಮಹಿಳಾ  ದಿನದಂದೇ ಮಹಿಳೆಗೆ ಅವಮಾನಿಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

- Advertisement -

ರಂಗಮಂದಿರ ಆವರಣದಲ್ಲಿದ್ದ ಮಳಿಗೆಗಳಿಗೆ ಭೇಟಿ ನೀಡಿದ ಮುನಿಸ್ವಾಮಿ, ಮಳಿಗೆಯಲ್ಲಿದ್ದ ಕುಂಕುಮ ಇಟ್ಟುಕೊಳ್ಳದ ಮಹಿಳೆಯನ್ನು ಕಂಡು ರೇಗಾಡಿದರು. ಮಾತ್ರವಲ್ಲ “ವೈಷ್ಣವಿ ಎಂದು ಅಂಗಡಿ ಹೆಸರನ್ನು ಏಕೆ ಇಟ್ಟುಕೊಂಡಿದ್ದೀಯಾ? ಮೊದಲು ಬೊಟ್ಟು ಇಟ್ಟುಕೋ’ ಎಂದು ಎಲ್ಲರ ಮುಂದೆ ಕೂಗಾಡಿದ್ದಾರೆ.

ಸ್ಥಳದಲ್ಲಿದ್ದ ಶಾಸಕ ಕೆ.ಶ್ರೀನಿವಾಸ ಗೌಡ ತಡೆದರೂ ಕೇಳದ ಮುನಿಸ್ವಾಮಿ ಕೂಗಾಟ ಮುಂದುವರಿಸಿದರು ಎಂದು ತಿಳಿದುಬಂದಿದೆ.



Join Whatsapp