ಅಯೋಧ್ಯೆ ಮಸೀದಿ ನಿರ್ಮಾಣಕ್ಕೆ ಎಡಿಎ ಅನುಮೋದನೆ

Prasthutha|

ಲಕ್ನೋ: ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದಂತೆ ಅಯೋಧ್ಯೆಯ ಧನ್ನಿಪುರದಲ್ಲಿ ಮಸೀದಿ ಕಟ್ಟಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ-ಎಡಿಎ ಅನುಮೋದನೆ ನೀಡಿದೆ.

- Advertisement -


ಒಂದು ಮಸೀದಿ, ಒಂದು ಆಸ್ಪತ್ರೆ, ಒಂದು ಸಂಶೋಧನಾ ಕೇಂದ್ರ, ಒಂದು ಸಮುದಾಯ ಪಾಕ ಶಾಲೆ ಹಾಗೂ ಒಂದು ಲೈಬ್ರರಿಯನ್ನು ಕಟ್ಟಲು ಐಐಸಿಎಫ್- ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ತೀರ್ಮಾನಿಸಿದೆ. ಬಾಬರಿ ಮಸೀದಿಗೆ ಬದಲಾಗಿ ಧನ್ನಿಪುರದಲ್ಲಿ 5 ಎಕರೆ ಸ್ಥಳ ನೀಡಲಾಗಿತ್ತು. ಅಯೋಧ್ಯೆ ಅಭಿವೃದ್ಧಿ ಪಾಧಿಕಾರವು ಯೋಜನೆಗೆ ಸಮ್ಮತಿ ನೀಡಲು ತಡ ಮಾಡಿದ್ದರಿಂದ ಎರಡು ವರ್ಷಗಳಿಂದ ಇದರ ಕಾರ್ಯ ನನೆಗುದಿಗೆ ಬಿದ್ದಿತ್ತು.


ಶುಕ್ರವಾರ ನಡೆದ ಮಂಡಳಿ ಸಭೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ನೀಡಲಾಯಿತು. ಐಐಸಿಎಫ್’ಗೆ ಮಂಜೂರು ಮಾಡಿದ ನಿರ್ಮಾಣ ಕಟ್ಟದ ನಕ್ಷೆ ನೀಡಲಾಗುತ್ತಿದೆ. ಇಲಾಖೆಯ ಎಲ್ಲ ನಿಯಮಾವಳಿ ಪಾಲಿಸಲಾಗುತ್ತಿದೆ ಎಂದು ಎಡಿಎ ಆಯುಕ್ತ ಗೌರವ್ ದಯಾಳ್ ತಿಳಿಸಿದರು.
ಎಲ್ಲ ಮಂಜೂರು ಪತ್ರ ಕೈ ಸೇರುತ್ತಲೇ ನಮ್ಮ ಟ್ರಸ್ಟ್ ಮೀಟಿಂಗ್ ನಡೆಸಿ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂದು ಐಐಸಿಎಫ್ ಕಾರ್ಯದರ್ಶಿ ಅತಾರ್ ಹುಸೇನ್ ಹೇಳಿದರು.
“ನಾವು 2021ರ ಜನವರಿ 26ರಂದು ಮಸೀದಿಗೆ ಅಡಿಗಲ್ಲು ಹಾಕಿದ್ದೆವು. ಭಾರತದ ಸಂವಿಧಾನ ಜಾರಿಗೆ ಬಂದ ದಿನವಾದ್ದರಿಂದ ಅಂದು ಇಟ್ಟುಕೊಂಡಿದ್ದೆವು.” ಎಂದೂ ಅವರು ಹೇಳಿದರು.
“ಧನ್ನಿಪುರ ಮಸೀದಿಯು ಬಾಬರಿ ಮಸೀದಿಗಿಂತ ದೊಡ್ಡದಿರುತ್ತದೆ. ಆದರೆ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯ ಮಾದರಿಯನ್ನು ಇದಕ್ಕೆ ತೆಗೆದುಕೊಂಡಿಲ್ಲ” ಎಂದು ಹುಸೇನ್ ಹೇಳಿದರು.
ಸರ್ವೋಚ್ಚ ನ್ಯಾಯಾಲಯವು 2019ರ ನವೆಂಬರ್ 9ರಂದು ನೀಡಿದ ಚಾರಿತ್ರಿಕ ತೀರ್ಪಿನಲ್ಲಿ ವಿವಾದಿತ ಸ್ಥಳವನ್ನು ರಾಮ ಮಂದಿರಕ್ಕೆ ನೀಡಲು ಮತ್ತು ಮಸೀದಿ ಕಟ್ಟಲು ಅಯೋಧ್ಯೆ ವ್ಯಾಪ್ತಿಯಲ್ಲಿ ಸರಿಯಾದ ಐದು ಎಕರೆ ಸ್ಥಳ ನೀಡುವಂತೆ ಸೂಚಿಸಿತ್ತು.

- Advertisement -


ಮಸೀದಿಯ ಜೊತೆಗೆ ಒಂದು ಮಸೀದಿ, ಒಂದು ಆಸ್ಪತ್ರೆ, ಒಂದು ಸಂಶೋಧನಾ ಕೇಂದ್ರ, ಒಂದು ಸಮುದಾಯ ಪಾಕ ಶಾಲೆ ಹಾಗೂ ಒಂದು ಲೈಬ್ರೆರಿಯನ್ನು ಕಟ್ಟಲು ಸಹ ಐಐಸಿಎಫ್ ನಿರ್ಧಾರ ತೆಗೆದುಕೊಂಡಿತು. ಆಸ್ಪತ್ರೆಯಲ್ಲಿ ಸರ್ವ ಧರ್ಮೀಯರಿಗೆ ಪ್ರವಾದಿ ಮುಹಮ್ಮದರು ಹೇಳಿದ ಮಾನವೀಯ ಮಾರ್ಗದಲ್ಲಿ ನೈಜ ಸೇವೆ ಒದಗಿಸಲಾಗುವುದು ಎಂದು ಹುಸೇನ್ ತಿಳಿಸಿದರು.
“ಆಸ್ಪತ್ರೆಯು ಬರೇ ಕಾಂಕ್ರೀಟ್ ಕಟ್ಟಡ ಆಗಿರುವುದಿಲ್ಲ. ಅದು ಮಸೀದಿಯ ಶಿಲ್ಪ ವಿಧಾನ, ಇಸ್ಲಾಮಿಕ್ ಚಿಹ್ನೆ ಮತ್ತು ಕ್ಯಾಲಿಗ್ರಪಿ ಬರಹಗಳನ್ನೂ ಒಳಗೊಂಡಿರುತ್ತದೆ” ಎಂದು ಹುಸೇನ್ ಹೇಳಿದರು.
“ಯಾವುದೇ ಧರ್ಮವನ್ನು ನೋಡದೆ ಎಲ್ಲಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಸಮುದಾಯ ಕಿಚನ್’ನಲ್ಲಿ ಹಸಿದವರಿಗೆ ಊಟ ನೀಡಲಾಗುತ್ತದೆ. ಒಂದು ಹಸಿರು ಪಟ್ಟಿಯು ಹವಾಮಾನ ಬದಲಾವಣೆಯನ್ನು ಎಚ್ಚರಿಸುವಂತೆ ಇರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರ ಮತ್ತು ಹಿಂದೂ ಮುಸ್ಲಿಂ ಸಹೋದರತ್ವದ ಬಗ್ಗೆ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆಯ ಆದ್ಯತೆಯ ವಿಷಯವಾಗಿರುತ್ತದೆ.” ಎಂದು ಐಐಸಿಎಫ್ ಕಾರ್ಯದರ್ಶಿ ತಿಳಿಸಿದರು.



Join Whatsapp