ಗೋ ಹತ್ಯೆ ಮಾಡುವವರು ನರಕದಲ್ಲಿ ಕೊಳೆಯುವರು ಎಂದ ಅಲಹಾಬಾದ್ ಹೈಕೋರ್ಟ್

Prasthutha|

ಲಕ್ನೋ: ಹಿಂದೂ ಧರ್ಮದಲ್ಲಿ ಗೋವುಗಳಿಗೆ ಇರುವ ಮಹತ್ವದ ಸ್ಥಾನವನ್ನು ಪರಿಗಣಿಸಿ, ಕೇಂದ್ರ ಸರಕಾರವು ಕೂಡಲೆ ದೇಶದೆಲ್ಲೆಡೆ ಗೋ ಹತ್ಯೆಯನ್ನು ನಿಷೇಧಿಸಬೇಕು ಮತ್ತು ಗೋವನ್ನು ದೇಶದ ರಕ್ಷಿತ ಪ್ರಾಣಿ ಎಂದು ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

- Advertisement -


ನ್ಯಾಯ ಪೀಠದಲ್ಲಿ ಒಬ್ಬರಾಗಿದ್ದ ಜಸ್ಟಿಸ್ ಶಮೀಮ್ ಅಹ್ಮದ್ ಅವರು, ಭಾರತವು ಒಂದು ಜಾತ್ಯತೀತ ದೇಶ, ಇಲ್ಲಿ ನಾವು ಹಿಂದೂ ಧರ್ಮ ಮತ್ತಿತರ ನಂಬಿಕೆಗಳನ್ನು ಗೌರವಿಸಬೇಕು. ದನವು ದೈವೀಕ ಎಂಬುದು ನಂಬಿಕೆ, ಅದು ಪ್ರಾಕೃತಿಕವಾಗಿಯೂ ಜನೋಪಯೋಗಿ ಆಗಿರುವುದರಿಂದ ಅದನ್ನು ಪೂಜಿಸಬೇಕು ಮತ್ತು ರಕ್ಷಿಸಬೇಕು ಎಂದು ಹೇಳಿದರು.
ಗೋವುಗಳು ವೇದಗಳ ಕಾಲದಲ್ಲಿ ಅಂದರೆ ಕ್ರಿಸ್ತಪೂರ್ವ 7ನೇ ಶತಮಾನದಿಂದಲೇ ಪೂಜಿಸುವ ಪ್ರಾಣಿಯಾಗಿದ್ದವು. ದನಗಳನ್ನು ಕೊಲ್ಲುವವರು ಮತ್ತು ಕೊಲ್ಲಲು ಬಿಡುವವರು ನರಕದಲ್ಲಿ ಅವರ ದೇಹದ ಕೂದಲು ಇರುವಷ್ಟು ಕಾಲ ಕೊಳೆಯುತ್ತ ಬೀಳಬೇಕಾಗುತ್ತದೆ ಎಂದೂ ಅಲಹಾಬಾದ್ ಉಚ್ಚ ನ್ಯಾಯಾಲಯದ ಪೀಠ ಹೇಳಿತು.


ಗೋ ಕೊಂದು ಮಾಂಸ ಮಾರಾಟಕ್ಕೆ ಹೊರಟಿದ್ದರು ಎಂಬ ಆರೋಪ ಹೊತ್ತಿದ್ದ ಮುಹಮ್ಮದ್ ಅಬ್ದುಲ್ ಖಾಲಿಕ್ ಎಂಬವರ ಮೇಲಿನ ಕ್ರಿಮಿನಲ್ ಮೊಕದ್ದಮೆ ರದ್ದು ಪಡಿಸಲು ನಿರಾಕರಿಸಿದ ಪೀಠ ಮೇಲಿನಂತೆ ಹೇಳಿತು.
ಕೋರ್ಟ್ ಬಾರ್ ನಲ್ಲಿ ಚರ್ಚೆಯಾದ ವಿಷಯವನ್ನೂ ಗಮನಿಸಿದ ನ್ಯಾಯ ಪೀಠವು ಅಪರಾಧವು ಅರ್ಜಿದಾರನನ್ನು ಮೀರಿ ಹೋಗದಂತೆ ನ್ಯಾಯಾಲಯ ನೋಡಬೇಕಾಗುತ್ತದೆ ಎಂದೂ ಹೇಳಿತು.
ಬ್ರಹ್ಮನು ದನ ಮತ್ತು ಪುರೋಹಿತರನ್ನು ಒಟ್ಟಿಗೆ ಸೃಷ್ಟಿಸಿದ. ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿದರೆ, ದನವು ಪೂಜೆಗಾಗಿ ಬೆಣ್ಣೆ ತುಪ್ಪಗಳನ್ನು ನೀಡುತ್ತದೆ ಎಂದೂ ನ್ಯಾಯಪೀಠವು ಹೇಳಿತು.

Join Whatsapp