ಭಾರತೀಯ ಮಾಧ್ಯಮಗಳು ಜನರ ನಂಬಿಕೆ ಕಳೆದುಕೊಂಡಿವೆ: ಮಾರ್ಕಂಡೇಯ ಕಟ್ಜು

Prasthutha|

ಹೈದರಾಬಾದ್: ಭಾರತೀಯ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಇತ್ತೀಚಿನ ತನ್ನ ಲೇಖನವೊಂದರಲ್ಲಿ ಭಾರತೀಯ ಮಾಧ್ಯಮಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

- Advertisement -

ಕಟ್ಜು ಪ್ರಕಾರ ಭಾರತೀಯ ಮಾಧ್ಯಮದ ದೊಡ್ಡ ವಿಭಾಗವು ಇಂದು ಜನರ ನಂಬಿಕೆಯನ್ನು ಕಳೆದುಕೊಂಡಿದೆ. ಅವುಗಳು ದೇಶದಲ್ಲಿ ಈಗ ಬಣ್ಣಿಸಲಾಗುತ್ತಿರುವಂತೆ  ‘ಗೋದಿ ಮೀಡಿಯಾ’ ವಾಗಿ ಬದಲಾಗಿವೆ ಎಂದು ಅವರು ಬರೆದಿದ್ದಾರೆ. ನಾಲ್ಕನೆ ಅಂಗವಾಗಿ ಕೆಲಸ ಮಾಡುವುದಕ್ಕೆ ಬದಲು ಮಾಧ್ಯಮವು ಮೊದಲ ಅಂಗವಾಗಿದೆ ಎಂಬ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಭಾರತೀಯ ಪತ್ರಕರ್ತ ರವೀಶ್ ಕುಮಾರ್ ರ ಹೇಳಿಕೆಯನ್ನು ಅವರು ಉಲ್ಲೇಖಿಸಿದ್ದಾರೆ.

ಮಾಧ್ಯಮದ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಕಟ್ಜು, “ 17 ಮತ್ತು 18ನೆ ಶತಮಾನದಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನಲ್ಲಿ ಊಳಿಗಮಾನ್ಯ ದಬ್ಬಾಳಿಕೆಯ ವಿರುದ್ಧ ಜನಪರ ಅಂಗವಾಗಿ ಮುದ್ರಣಾ ಮಾಧ್ಯಮ ಉದಯವಾಯಿತು. ಆಗ ಅಸ್ತಿತ್ವದಲ್ಲಿದ್ದ ಇತರ ಅಂಗಗಳು ಊಳಿಗಮಾನ್ಯ ಅಧಿಕಾರಿಗಳಾದ ರಾಜರು ಮತ್ತು ಆತನ ಶ್ರೀಮಂತರ ಒಕ್ಕೂಟಗಳ ಅಧೀನದಲ್ಲಿದ್ದವು. ತಮ್ಮನ್ನು ಪ್ರತಿನಿಧಿಸುವ ಅಂಗವೊಂದರ ಅಗತ್ಯ ಜನರಿಗಿತ್ತು. ಈ ರೀತಿಯಲ್ಲಿ ಮುದ್ರಣಾ ಮಾಧ್ಯಮ ನಾಲ್ಕನೆ ಅಂಗವಾಗಿ ಅಸ್ತಿತ್ವಕ್ಕೆ ಬಂತು. ಯಥಾ ಸ್ಥಿತಿಯನ್ನು ಕಾಪಾಡ ಬಯಸಿದ್ದ ಉಳಿಗಮಾನ್ಯ ಅಂಗಗಳಿಗೆ ವ್ಯತಿರಿಕ್ತವಾಗಿ ಯುರೋಪ್ ಮತ್ತು ಅಮೆರಿಕಾದಲ್ಲಿ ಭವಿಷ್ಯದ ಧನಿಯನ್ನು ಅದು ಪ್ರತಿನಿಧಿಸಿತು. ಅದರೊಂದಿಗೆ ಮಾಧ್ಯಮವು ಯುರೋಪನ್ನು ಉಳಿಗಮಾನ್ಯ ಸಮಾಜದಿಂದ ಆಧುನಿಕ ಸಮಾಜಕ್ಕೆ ಬದಲಾಯಿಸುವುದರಲ್ಲಿ ಮಾಧ್ಯಮ ಪ್ರಮುಖ ಪಾತ್ರವಹಿಸಿತು.

- Advertisement -

“ಭಾರತವನ್ನು ಹಿಂದುಳಿಯುವಿಕೆಯಿಂದ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಹಾಗೂ ಕೈಗಾರಿಕಾ ರಾಷ್ಟ್ರವನ್ನಾಗಿ ಮಾರ್ಪಡಿಸುವುದು ನಮ್ಮ ಗುರಿಯಾಗಿದೆ. ಇದರಲ್ಲಿ ಭಾರತೀಯ ಮಾಧ್ಯಮದ ಪಾಲು ಅತ್ಯಂತ ಮುಖ್ಯವಾದದ್ದು. ನಾವು ಹಾಗೆ ಮಾಡಲು ವಿಫಲವಾದರೆ ನಮ್ಮ ರಾಷ್ಟ್ರವು ವ್ಯಾಪಕ ಬಡತನ, ನಿರುದ್ಯೋಗ, ಪೋಷಕಾಂಶದ ಕೊರತೆ, ಮೂಢನಂಬಿಕೆ ಮತ್ತು ಅನಕ್ಷರತೆಗಳೊಂದಿಗೆ ನರಳಲಿದೆ” ಎಂದು ಅವರು ಹೇಳಿದರು.

“ಭಾರತೀಯ ಮಾಧ್ಯಮಗಳು ಹೆಚ್ಚಿನ ವೇಳೆ ನೈಜ ವಿಷಯಗಳ ಬದಲು ವಿಷಯವೇ ಅಲ್ಲದ ವಿಷಯಗಳತ್ತ ಜನರ ಗಮನವನ್ನು ಸೆಳೆಯುತ್ತಿದೆ” ಎಂದು ಕಟ್ಜು ಹೇಳಿದರು.

“ಭಾರತದ ನಿಜವಾದ ಸಮಸ್ಯೆ ಸಾಮಾಜಿಕ-ಆರ್ಥಿಕವಾದದ್ದು. 80% ಎದುರಿಸುತ್ತಿರುವ ಭಯಂಕರ ಬಡತನ, ತೀವ್ರ ನಿರುದ್ಯೋಗ, ಬೆಲೆಯೇರಿಕೆ, ವೈದ್ಯಕೀಯ ಆರೈಕೆ ಕೊರತೆ, ಶಿಕ್ಷಣ ಮತ್ತು ಗೌರವ ಹತ್ಯೆ, ಜಾತಿ ದಬ್ಬಾಳಿಕೆ ಹಾಗೂ ಧಾರ್ಮಿಕ ಮೂಲಭೂತವಾದದಂತಹ ಸಮಸ್ಯೆಗಳು ದೇಶದ ಪ್ರಮುಖ ವಿಷಯಗಳಾಗಿವೆ. ಈ ವಿಷಯಗಳನ್ನು ಸುದ್ದಿ ಮಾಡುವುದಕ್ಕೆ ಬದಲಾಗಿ ಮಾಧ್ಯಮಗಳು ಸಿನೆಮಾ ನಟರು, ಅವರ ಜೀವನ, ಪಾಪ್ ಸಂಗೀತ, ಡಿಸ್ಕೊ ಡ್ಯಾನ್ಸ್, ಜೋತಿಷ್ಯ, ಕ್ರಿಕೆಟ್, ರಿಯಾಲಿಟಿ ಮತ್ತು ಫ್ಯಾಶನ್ ಶೋಗಳಂತಹ ವಿಷಯವೇ ಅಲ್ಲದ ವಿಷಯಗಳಿಗೆ ಗಮನ ನೀಡುತ್ತಿದೆ” ಎಂದು ಅವರು ತಿಳಿಸಿದರು.  

ಜನರ ನಿಜವಾದ ಸಮಸ್ಯೆಗಳತ್ತ ಮಾಧ್ಯಮದ ನಿರಾಸಕ್ತಿಯ ಕುರಿತ ವಿಶಿಷ್ಟ ಘಟನೆಯನ್ನು ಉಲ್ಲೇಖಿಸುತ್ತಾ”ಕೆಲವೊಮ್ಮೆ ಲಕ್ಮೆ ಫ್ಯಾಶನ್ ಮುಂಬೈಯಲ್ಲಿ ಆಯೋಜಿಸುವ ಫ್ಯಾಶನ್ ಶೋವನ್ನು 512 ಮಾನ್ಯತೆ ಪಡೆದ ಪತ್ರಕರ್ತರು ವರದಿ ಮಾಡುತ್ತಾರೆ. ಅಲ್ಲೇ ಸಮೀಪದ ವಿದರ್ಭದಲ್ಲಿ ಹತ್ತಿ ಬೆಳೆದ ಪುರುಷರು ಮತ್ತು ಮಹಿಳೆಯರು  ತಮ್ಮ ಆರ್ಥಿಕ ದುಸ್ಥಿತಯ ಕಾರಣದಿಂದ ಆತ್ಮಹತ್ಯೆ ಮಾಡುತ್ತಿರುವಾಗ  ಆ ಫ್ಯಾಶನ್ ಶೋನಲ್ಲಿ ಈ ಮಹಿಳೆಯರು ಹತ್ತಿ ಬಟ್ಟೆಗಳನ್ನು ಪ್ರದರ್ಶಿಸುತ್ತಿದ್ದರ್. ಸ್ಥಳೀಯ ಒಂದೆರಡು ಪತ್ರಕರ್ತರನ್ನು ಹೊರತುಪಡಿಸಿ ಯಾರೂ ಕೂಡ ಅವರ ಕತೆಯನ್ನು ಹೇಳಲೇ ಇಲ್ಲ” ಎಂದು ಕಟ್ಜು ಹೇಳಿದ್ದಾರೆ.



Join Whatsapp